Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಲೆಬನಾನ್ ಮೇಲೆ ಇಸ್ರೇಲ್ ದಾಳಿ, ೫೪ ಸಾವು

ಲೆಬನಾನ್ : ಕಳೆದ ೧೯ ದಿನಗಳಿಂದ ಲೆಬನಾನ್‌ನ ಬಂಡುಕೋರರ ವಿರುದ್ಧ ಸಾರಿದ್ದ ಯುದ್ಧವನ್ನು ತೀವ್ರಗೊಳಿಸಿರುವ ಇಸ್ರೇಲ್ ಭಾನುವಾರ ಬಾಂಬ್‌ದಾಳಿ ನಡೆಸಿದ್ದರಿಂದ ಮಕ್ಕಳೂ ಸೇರಿದಂತೆ ಒಂದೇ ದಿನದಲ್ಲಿ ೫೪ ಮಂದಿ ಮೃತಪಟ್ಟಿದ್ದಾರೆ.

 

ಈತನಕ ೫೦೦ಕ್ಕೂ ಹೆಚ್ಚು ಮುಗ್ಧ ಜನರ ಸಾವಿಗೆ ಕಾರಣವಾದ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಲೆಬನಾನ್ ಪ್ರಧಾನಿ ಫಾದ್ ಶಿನಿಯೋರಾ ಅವರು, ಇದೊಂದು ಯುದ್ಧಾಪರಾಧವಾಗಿದೆ ಎಂದಿದ್ದಾರೆ.

 

ತೀವ್ರ ದಾಳಿಯಿಂದ ನಾಮಾವಶೇಷವಾಗಿರುವ ಖಾನಾ ಗ್ರಾಮದಲ್ಲಿ ಸಂತ್ರಸ್ತರನ್ನು ಪತ್ತೆ ಹಚ್ಚಲಾಗದೆ ರಕ್ಷಣಾ ಕಾರ್ಯಕರ್ತರು ಅಲ್ಲಿಂದ ಹಿಂದಿರುಗಿದ್ದಾರೆ.  ಯುದ್ಧ ಅಂತ್ಯಗೊಳಿಸಲು ಅಮೇರಿಕಾದ ವಿದೇಶಾಂಗ ಸಚಿವೆ ಕಾಂಡೋಲಿಸಾ ರೈಸ್ ಒತ್ತಾಯಿಸಿ ವಾಪಾಸಾದ ಬಳಿಕ ಇಸ್ರೆಲ್ ದಾಳಿಯನ್ನು ಮತ್ತಷ್ಟು ಹೆಚ್ಚಿಸಿದೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com