ಭಾರತ-ಪಾಕ್ ಶಾಂತಿ ಮಾತುಕತೆಗೆ ಢಾಕಾ ಸಜ್ಜು
ಢಾಕಾ: ಢಾಕಾದಲ್ಲಿ
ನಡೆಯುವ ಸಾರ್ಕ್ ಶೃಂಗ ಸಭೆಯಲ್ಲಿಭಾರತ ಮತ್ತು ಪಾಕಿಸ್ತಾನ ನಡುವಿನ ಶಾಂತಿ ಮಾತುಕತೆಗೆ
ಮತ್ತೆ ಚಾಲನೆ ಸಿಗಲಿದೆ.
ಭಾರತ ಪ್ರತಿನಿಧಿ ಶ್ಯಾಮ್
ಸರನ್, ಢಾಕಾದ ಹೈ ಕಮೀಷನರ್ ಔತಣಕೂಟದಲ್ಲಿ ಭಾಗವಹಿಸಿ ಮಾತನಾಡುತ್ತಾ ಗಡಿ ಸಮಸ್ಯೆ
ಹಾಗೂ ದಕ್ಷಿಣ ಏಷ್ಯಾ ವ್ಯಾಪಾರ ಒಪ್ಪಂದದ ಬಗ್ಗೆ ಪಾಕ್ ಜೊತೆ ಮಾತಾಡುವುದು ಅವಶ್ಯವೆಂದರು.
ಪಾಕಿಸ್ತಾನದ ಪ್ರತಿನಿಧಿ
ರಿಯಾಜ್ ಮಹಮದ್ ಖಾನ್ ಪ್ರಕಾರ ಶಾಂತಿ ಮಾತುಕತೆಯಿಂದ ನುಣುಚಿಕೊಳ್ಳುವ ಪ್ರಮೇಯವೇ
ಇಲ್ಲ, ಆದ್ದರಿಂದ ಎರಡೂ ದೇಶದ ಹಿತಕ್ಕಾಗಿ ಸಾರ್ಕ್ ಸಭೆ ಅನುಕೂಲಕರವಾಗಿದೆ ಎಂದರು.