ಹೆಲ್ಮೆಟ್ ಕಡ್ಡಾಯ: ೩೦ದಿನ ಮುಂದೂಡಿಕೆ
ಬೆಂಗಳೂರು :
ಆಗಸ್ಟ್ ೧ರಿಂದ ಜಾರಿಯಾಗಬೇಕಿದ್ದ ಹೆಲ್ಮೆಟ್ ಕಡ್ಡಾಯ ಆದೇಶವನ್ನು ರಾಜ್ಯ ಸರ್ಕಾರ
೩೦ ದಿನಗಳ ಕಾಲ ಮುಂದೂಡಿದೆ.
ಮುಖ್ಯಮಂತ್ರಿ
ಎಚ್.ಡಿ.ಕುಮಾರ ಸ್ವಾಮಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಈ ವಿಷಯ ಸ್ಪಷ್ಟಪಡಿಸಿದ್ದು
ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯವನ್ನು ಹಿಂದಕ್ಕೆ ಪಡೆಯಲು ತೀರ್ಮಾನಿಸಲಾಗಿದೆ
ಎಂದಿದ್ದಾರೆ.
ದ್ವಿಚಕ್ರ ಸವಾರರಿಗೆ
ಹೆಲ್ಮೆಟ್ ಕಡ್ಡಾಯ ಆದೇಶದ ಜಾರಿಗೆ ವಿರೋಧಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ
ಜನಾಭಿಪ್ರಾಯ ಪಡೆಯಬೇಕಾಗಿರುವುದರಿಂದ ೩೦ ದಿನಗಳ ಕಾಲ ಮುಂದೂಡಲಾಗಿದೆ ಎಂದು
ಅವರು ಸ್ಪಷ್ಟಪಡಿಸಿದ್ದಾರೆ.