Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ದಾವಣಗೆರೆ ನಗರಾಭಿವೃದ್ಧಿ ಕಾರ್ಯ ಶುರು

ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ

 

ದಾವಣಗೆರೆ: ದಾವಣಗೆರೆ ನಗರದ ಅಭಿವೃದ್ಧಿಗಾಗಿ ಸಂಸದರ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ ೮೬ ಲಕ್ಷ ಬಿಡುಗಡೆ ಮಾಡಿರುವುದಾಗಿ ಲೋಕಸಭಾ ಸದಸ್ಯ ಜಿ. ಎಂ. ಸಿದ್ಧೇಶ್ವರ ಹೇಳಿದ್ದಾರೆ.

 

೮ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ದೇವರಾಜ ಅರಸ್ ಬಡಾವಣೆಯ ರಸ್ತೆ ನಿರ್ಮಾಣ ಕಾಂiiವನ್ನು ಉದ್ಘಾಟಿಸುತ್ತಾ ಮಾತನಾಡಿದ ಸಿದ್ಧೇಶ್ವರ, ನಗರದಲ್ಲಿ ಉತ್ತಮ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆಗಳಿಲ್ಲ. ಅದಕ್ಕಾಗಿ ಸಹಾಯಕ ಧನವಾಗಿ ೮೬ ಲಕ್ಷ ರೂಪಾಯಿಯನ್ನು ಸಂಸದರ ನಿಧಿಯಿಂದ ನೀಡಲಾಗಿದೆ.

 

ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಸಮವಿಕಾಸ ಯೋಜನೆ ಅಡಿಯಲ್ಲಿ ಹಳ್ಳಿಗಳ ಅಭಿವೃದ್ಧಿಗಾಗಿ ಇನ್ನೂ ೭೬ ಕೋಟಿ ಖರ್ಚಾಗಲಿದೆ ಎಂದು ವಿವರಿಸಿದರು.

 

ಬಿಜೆಪಿಯ ಎಂ. ಜಿ .ಬಕ್ಕೇಶ್ ಮಾತನಾಡುತ್ತಾ ನಗರದಲ್ಲಿ ನಿರ್ಮಿಸಿರುವ ಸಿಮೆಂಟ್ ರಸ್ತೆಗಳು ಹಾಳಾಗಿವೆ, ಸಿಎಂಸಿಯವರು ಈ ಬಗ್ಗೆ ಗಮನ ಹರಿಸಬೇಕು ಎಂದರು.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com