ಚಿಕೂನ್ ಗುನ್ಯಾ ತಡೆಗಟ್ಟಲು ಕೇಂದ್ರಕ್ಕೆ ಮೊರೆ
ಚಿಕೂನ್ ಗುನ್ಯಾ ರಕ್ತ ಪರೀಕ್ಷೆ ನಡೆಸುವ
ಪ್ರಯೋಗಾಲಯಗಳು ರಾಜ್ಯದಲ್ಲಿಲ್ಲ
ಬೆಂಗಳೂರು :
ಚಿಕೂನ್ ಗುನ್ಯಾ ರೋಗದ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕವೂ ಸೇರಿದಂತೆ
ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರ ಸರ್ಕಾರಗಳು ಉನ್ನತ ಮಟ್ಟದ
ನಿಯೋಗವನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿ ರೋಗ ತಡೆಗೆ ನೆರವು ನೀಡುವಂತೆ ಮನವಿ
ಸಲ್ಲಿಸಿದೆ.
ಭಾನುವಾರ
ಬೆಂಗಳೂರಿನಲ್ಲಿ ನಡೆದ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರ
ರಾಜ್ಯಗಳ ಆರೋಗ್ಯ ಸಚಿವರ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಗಿದೆ.
ಚಿಕೂನ್ ಗುನ್ಯಾ ಶಂಕಿತ
ರೋಗಿಗಳ ರಕ್ತ ಪರೀಕ್ಷೆ ನಡೆಸುವ ಯಾವುದೇ ಪ್ರಯೋಗಾಲಯಗಳು ನಮ್ಮ
ರಾಜ್ಯದಲ್ಲಿ ಇಲ್ಲ. ಹಾಗಾಗಿ ಪ್ರಯೋಗಾಲಯಗಳನ್ನು ಸ್ಥಾಪಿಸಲು ನಿಯೋಗ ಕೇಂದ್ರವನ್ನು
ಒತ್ತಾಯಿಸಲಿದೆ ಜತೆಗೆ ರೋಗ ತೆಡೆಗೆ ದೀರ್ಘಾವಧಿಯ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳುವ ಬಗ್ಗೆಯೂ ನಿಯೋಗ ಕೇಂದ್ರ ಸರ್ಕಾರದ ಜೊತೆ ಚರ್ಚಿಸಲಿದೆ.