Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಮಡಿಕೇರಿಯಲ್ಲಿ ಹುಲಿಭಯ

ವಿರಾಜಪೇಟೆಯ ಕಾರ್ಮಾಡುವಿನಲ್ಲಿ ಹುಲಿಯೊಂದು ಜನರನ್ನು ಬೆದರಿಸುತ್ತಿದೆ

 

ಮಡಿಕೇರಿ : ಪಶ್ಚಿಮ ಘಟ್ಟದ ರಮ್ಯ ತಾಣಗಳಲ್ಲೊಂದಾದ ಮಡಿಕೇರಿಯಲ್ಲಿ ಇತ್ತೀಚೆಗೆ ವ್ಯಾಘ್ರವೊಂದು ಪದೇ-ಪದೇ ದಾಳಿಯಿಡುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ತೀವ್ರ ಆತಂಕ ಉಂಟಾಗಿದೆ.

 

ಕೊಡಗಿನಲ್ಲಿ ವನ್ಯ ಪ್ರಾಣಿಗಳ ದಾಳಿ ಸಾಮಾನ್ಯವೇ ಆಗಿದ್ದರೂ ಕೂಡ, ಇತ್ತೀಚೆಗೆ ದಕ್ಷಿಣ ಕೊಡಗಿನ ಪ್ರಮುಖ ಪಟ್ಟಣಗಳಲ್ಲೊಂದಾದ ವಿರಾಜಪೇಟೆಯ ಕಾರ್ಮಾಡು ಗ್ರಾಮದ ಕೊಲ್ಲಿಹಾಡಿಯಲ್ಲಿ ತೋಟದ ಕಾರ್ಮಿಕ ಕುರುಬರ ಚೆನ್ನಪ್ಪ ಎಂಬ ಯುವಕನೊಬ್ಬನ ಹೊಟ್ಟೆ ಸಿಗಿದು ಛಿದ್ರಗೊಳಿಸಿರುವ ವೃತ್ತಾಂತವನ್ನು ಭಯ ಮಿಶ್ರಿತ ಧ್ವನಿಯಲ್ಲಿ ಮಾಧ್ಯಮದವರಿಗೆ ತಿಳಿಸಿದ್ದಾರೆ.

 

ಈಗಾಗಲೇ ಕೊಡಗಿನಲ್ಲಿ ವನ್ಯಜೀವಿಗಳ ದಾಳಿ ಕಾಫಿ ಬೆಳೆಗಾರರನ್ನು ಜೀವ ಭಯಕ್ಕೆ ತಳ್ಳಿದೆ.  ಒಂದು ಕಡೆ ಕಾಡಾನೆಗಳು ತೋಟ-ಗದ್ದೆಗಳಿಗೆ ನುಗ್ಗಿ ಫಸಲನ್ನು ನಾಶಪಡಿಸುತ್ತಿದ್ದರೆ, ಇನ್ನೊಂದು ಕಡೆ ನರಭಕ್ಷಕ ವ್ಯಾಘ್ರದ ಹಾವಳಿಯಿಂದಾಗಿ ಜನರು ಆತಂಕಕ್ಕೊಳಗಾಗಿದ್ದಾರೆ.

 

ಕುಟ್ಟ ವ್ಯಾಪ್ತಿಯ ಜೇನು ಕುರುಬರ ಮಣಿ ಎಂಬಾತನ ಮೇಲೆ ಬುಧವಾರ ತೋಟದಲ್ಲಿ ಕಾರ್ಯಮಗ್ನನಾಗಿದ್ದಾಗ ಹಲ್ಲೆ ಮಾಡಿತ್ತು. ಆಗ ಆತನ ಸಹ ಕೂಲಿಕಾರ ನಾಗರಾಜು ಬೊಬ್ಬಿಟ್ಟಿರುವುದರಿಂದ ನರಭಕ್ಷಕ ಹುಲಿ ಅಲ್ಲಿಂದ ತಕ್ಷಣ ಕಾಲ್ಕಿತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com