Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಸಮಾಜಮುಖೀ ಯುವಕರು

ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಮಾಜಮುಖಿ ಚಟುವಟಿಕೆಗಳು

  • ಮಲೆನಾಡಿಗ

  • ನಗರದ ಬಿ.ಎಂ.ಎಸ್. ಇಂಜನಿಯರಿಂಗ್ ಕಾಲೇಜಿನಿಂದ ಪದವಿ ಪಡೆದು ಹೊರಬಂದ ವಿದ್ಯಾರ್ಥಿಗಳಿಗೆ ಮುಂದೆ ತಮ್ಮ ಸ್ವಂತ ದುಡಿಮೆಯ ಹಾದಿಯನ್ನು ಯೋಚಿಸುವುದರ ಜೊತೆಗೆ ಸಮಾಜಕ್ಕೆ ಏನಾದರೂ ಒಳಿತು ಮಾಡಬೇಕೆಂಬ ಹಂಬಲದಿಂದ ಶುರುಮಾಡಿದ ಸಂಸ್ಥೆಯೇ `ಸಮಾಜ ಸೇವಕರ ಸಮಿತಿ.

     

    ಸಮಾನ ಮನಸ್ಕರ ಚಿಂತನೆಯ ಫಲವಾಗಿ ಹುಟ್ಟಿದ ಸಮಿತಿಯು ಇಂದು ನೂರಕ್ಕೂ ಅಧಿಕ ಸದಸ್ಯರನ್ನು    ಹೊಂದಿದೆ.

     

    ಸಮಾಜ ಸೇವಕರ ಸಮಿತಿಯವರ ಉದ್ದೇಶವು ಸರಳವಾಗಿದೆ: `ಎಲ್ಲಾ ಸಂಪತ್ತುಗಳ ಮೂಲ ಜ್ಞಾನವನ್ನು ಎಲ್ಲರಿಗೂ ಹಂಚುವುದೇ ನಮ್ಮ ಕಾಯಕ. ಶಿಕ್ಷಣದ ಮೂಲಕ ಸಮಾಜದ ಸರ್ವತೋಮುಖ ಬೆಳವಣಿಗೆ ಸಾಧಿಸಿ ಸ್ವಾವಲಂಭಿ ಜನಾಂಗವನ್ನು ಸೃಷ್ಟಿಸುವುದು.

     

    ಶಿಕ್ಷಣವಷ್ಟೇ ಅಲ್ಲದೆ ಕಲೆ, ಸಾಹಿತ್ಯ, ಕ್ರೀಡೆ ಇನ್ನಿತರ ಕ್ಷೇತ್ರಕ್ಕೂ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿರುವ ಸಮಿತಿ ಎಲೆಮರೆಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದೆ. ಇವರಲ್ಲಿ ಸಾಹಿತಿ ವಿ.ಸಿ.ಐರಸಂಗ, ಪವರ್‌ಲಿಪ್ಟರ್ ಯೋಗೇಶಪ್ಪ, ಪರಿಸರವಾದಿ ಶಿವಮಲ್ಲು ಪ್ರಮುಖರು.

     

    ಸಮಿತಿ ತನ್ನ ಕಾರ್ಯಕ್ರಮಕ್ಕೆ ಯಾವುದೇ ಸರ್ಕಾರಿ ಸಂಸ್ಥೆ ಹಾಗೂ ಖಾಸಗಿ ಸಂಸ್ಥೆಗಳಿಂದ ಧನಸಹಾಯ ಪಡೆಯದು. ಸದಸ್ಯರೇ ತಮ್ಮ ಸ್ವಂತ ಖರ್ಚಿನಲ್ಲಿ ಎಲ್ಲಾ ವೆಚ್ಚವನ್ನು ಭರಿಸುತ್ತಾರೆ.

     

    ಸಮಿತಿಗೆ ಸದಸ್ಯರಾಗಲು ಹೆಚ್ಚಿನ ನಿಬಂಧನೆಗಳಿಲ್ಲ. ಸಮಿತಿಗೆ ಸದಸ್ಯರಾಗಲೇಬೇಕೆಂಬ ನಿಯಮವಿಲ್ಲ. ಸಮಾಜದ ಒಳಿತಿಗೆ ದುಡಿಯುವ ಮನಸ್ಸು ಉಳ್ಳವರು ಎಲ್ಲಿದ್ದರೂ ಸರಿ, ನಮ್ಮ ಸಮಿತಿಯ ಸದಸ್ಯರೇ ಆಗಿರುತ್ತಾರೆ ಎನ್ನುತ್ತಾರೆ ಸಮಿತಿಯ ಕಾರ್ಯದರ್ಶಿ ರಾಜ್‌ಕುಮಾರ್. ಅವರ ಪ್ರಕಾರ ದಿನೇ ದಿನೇ ಹೆಚ್ಚು ಸಂಸ್ಥೆಗಳು ಉದಯಿಸುತ್ತಿರುವುದು ಒಳ್ಳೆಯ ಸೂಚನೆಯಲ್ಲ, ಸಂಸ್ಥೆಗಳು ಸೃಷ್ಟಿಸುವುದು ಮುಖ್ಯವಲ್ಲ. ತಾವು ತಮ್ಮ ಸಂಸ್ಥೆಯ ಉದ್ದೇಶವನ್ನು ತಿಳಿದು ಅದನ್ನು ಕರ್ತವ್ಯದಂತೆ ಪಾಲಿಸಿ ಗುರಿ ಸಾಧಿಸಬೇಕು. ಸಂಸ್ಥೆಗಳು ಗುರಿಸಾಧನೆಯ ನಂತರ ಅವಸಾನ ಕಾಣಬೇಕು ಎಂದಿದ್ದಾರೆ.

     

    ಈಗಾಗಲೇ ಶೈಕ್ಷಣಿಕವಾಗಿ ಬಳ್ಳಾರಿಯಲ್ಲಿ ಶಾಲೆ ತೆರೆದು ಅಲ್ಲಿನ ಮಕ್ಕಳನ್ನು ಸಲುಹುತ್ತಿದೆ. ಜೊತೆಗೆ ಗಿರಿನಗರ ಶಾಲೆಗೆ ಭೇಟಿ ನೀಡಿ, ಅಗತ್ಯ ರೀತಿಯ ಸಹಾಯ ಮಾಡುತ್ತಿದ್ದಾರೆ.

     

    ಸಮಾಜ ಸೇವಕರಿಗಾಗಿ ಒಂದು ದಿನವನ್ನು ಮೀಸಲಿಡುವ ಉದ್ದೇಶದಿಂದ ಆಗಸ್ಟ್ ೧ ರಂದು ಸಮಾಜಸೇವಕ ದಿನ ಆಚರಿಸುತ್ತಾ ಬಂದಿರುವ ಸಮಿತಿ, ಈಗ ನಾಲ್ಕನೆ ವರ್ಷದ ವಾರ್ಷಿಕೋತ್ಸವವನ್ನು ನಯನ ಸಭಾಂಗಣದಲ್ಲಿ ಆಯೋಜಿಸಿದೆ. ಖ್ಯಾತ ವಿಮರ್ಶಕ ನರಹಳ್ಳಿ ಬಾಲಸುಬ್ರಮಣ್ಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. NAL ಮಾಜಿ ನಿರ್ದೇಶಕ ರೊದ್ದಂ ನರಸಿಂಹ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

     

    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

    ರಾಜ್ ಕುಮಾರ್ : 9448171069

     

    Print This PagePrint this page

    ಮುಖಪುಟ

    Copyright Vikranta Prakashana 2006. All rights reserved.
    Site best viewed in 800x600 resolution.

    Email : feedback@vikrantakarnataka.com