ನಾಗಾರ್ಜುನಕ್ಕೆ
ಅಸ್ತುಕೊಟ್ಟಿದ್ದು ಬಿಜೆಪಿ ಸರಕಾರ
ಸಚಿವ
ರೇವಣ್ಣರಿಂದ ಮನೋರಮಾಗೆ ಧಮಕಿ
ಬೆಂಗಳೂರು :
ಕರಾವಳಿಯ ನಂದಿಕೂರಿನಲ್ಲಿ ತಲೆಯೆತ್ತುತ್ತಿರುವ ನಾಗಾರ್ಜುನ ಉಷ್ಣವಿದ್ಯುತ್ ಸ್ಥಾವರವನ್ನು
ಬಿಜೆಪಿ ಸಂಸದೆ ಮನೋರಮಾ ಮಧ್ವರಾಜ್ ತೀವ್ರವಾಗಿ ಖಂಡಿಸುತ್ತಿದ್ದರೆ, ವಿದ್ಯುತ್ ಖಾತೆ
ಸಚಿವ ಎಚ್.ಡಿ. ರೇವಣ್ಣ ನಾಗಾರ್ಜುನ ಬಿಜೆಪಿಯ ಕನಸೇ ಹೊರತು ದೇವೇಗೌಡರ ಕನಸಲ್ಲ
ಎಂದು ಮರು ದಬಾಯಿಸಿದ್ದಾರೆ.
ಕೇಂದ್ರದಲ್ಲಿ ವಾಜಪೇಯಿ
ನೇತೃತ್ವದ ಸರಕಾರವಿದ್ದಾಗ ವಾಜಪೇಯಿಯವರೇ ನಾಗಾರ್ಜುನದ ಕನಸನ್ನು
ಕಂಡಿದ್ದರು. ನಾಗಾರ್ಜುನ ಯೋಜನೆಯನ್ನು ಸಾಕಾರಗೊಳಿಸಲು ಮಾಜಿ ಪ್ರಧಾನಿ
ದೇವೇಗೌಡ ಅವರು ಹಣ ತೆಗೆದುಕೊಂಡಿದ್ದಾರೆ ಎಂಬ ಮನೋರಮಾ ಅವರ ಆಪಾದನೆಯನ್ನು
ತಳ್ಳಿಹಾಕಿದ ರೇವಣ್ಣ ನಾಗಾರ್ಜುನ ಸ್ಥಾವರಕ್ಕೆ ಅನುಮತಿ ನೀಡಿದವರೇ ವಾಜಪೇಯಿವರು
ಎಂಬುದನ್ನು ಮನೋರಮಾ ಮರೆತಿರಬೇಕು ಎಂದು ಕಟಕಿಯಾಡಿದರು.