Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಕೆಆರೆಸ್ ಗೋಡೆ ಕುಸಿದು ೩೫ ಕೋಟಿ ನಷ್ಟ

ಇನ್ನೆರಡು ತಿಂಗಳಲ್ಲಿ ಗೋಡೆ ರಿಪೇರಿ

 

ಮೈಸೂರು : ರಾಜ್ಯದ ಜೀವ ನದಿಗಳಲ್ಲೊಂದಾದ ಕಾವೇರಿ ನದಿ ಜಲಾಶಯ ಮೈದುಂಬಿ ಹರಿಯುತ್ತಿದ್ದಾಳೆ ಎನ್ನುವಾಗಲೇ ಶುಕ್ರವಾರ ಉತ್ತರ ದಂಡೆಯಲ್ಲಿದ್ದ ಗೋಡೆ ಕುಸಿದಿದ್ದರ ಪರಿಣಾಮವಾಗಿ ಇನ್ನೆರಡು ತಿಂಗಳಲ್ಲಿ ಕಾರ್ಯಾರಂಭಗೊಳ್ಳಬೇಕಿದ್ದ ೧೨ ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರಕ್ಕೆ ನೀರು ನುಗ್ಗಿದೆ. ಸ್ಥಾವರ ಸಂಪೂರ್ಣ ಜಲಾವೃತ್ತಗೊಂಡಿದೆ.

 

ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲದೇ ಇದ್ದರೂ ಕೂಡ ಸ್ಥಾವರ ಜಲಾವೃತ್ತಗೊಂಡಿದ್ದರಿಂದ ಸುಮಾರು ೩೫ ಕೋಟಿ ರೂಪಾಯಿಗಳಿಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

 

ಕೆಆರ್‌ಎಸ್ ಜಲಾಶಯದಿಂದ ನೇರವಾಗಿ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಸುಮಾರು ೨೫೦೦ ಕ್ಯೂಸೆಕ್ಸ್ ನೀರು ಬರುವಂತೆ ವ್ಯವಸ್ಥೆ ಮಾಡಲಾಗಿತ್ತು, ಹರಿದು ಬರುವ ಹೆಚ್ಚು ನೀರು ತಡೆಯಲು ನಿರ್ಮಿಸಿದ್ದ ತಡೆಗೋಡೆ ಸಂಪೂರ್ಣವಾಗಿ ಒಡೆದು ಹೋದ ಪರಿಣಾಮ ಜಲಾಶಯದಿಂದ ಮೂರು ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಸ್ಥಾವರದೊಳಗೆ ಪ್ರವೇಶಿಸಿದೆ.

 

ಶುಕ್ರವಾರ ಬೆಳಗ್ಗೆ ೧೦:೩೦ಕ್ಕೆ ತಡೆ-ಗೋಡೆಯಿಂದ ನೀರು ಹರಿದು ಬರುವುದನ್ನು ಕಾರ್ಮಿಕರು ಗಮನಿಸಿ ಘಟಕದಿಂದ ಹೊರ ಬಂದಿದ್ದಾರೆ. ಅವರು ಹೊರಬಂದ ಕೇವಲ ೧೫ ನಿಮಿಷಗಳಲ್ಲೇ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

 

ರಭಸದಿಂದ ನೀರು ನುಗ್ಗಿದ ಪರಿಣಾಮ ನೀರು ಸರಬರಾಜಾಗುತ್ತಿದ್ದ ಕ್ರೆಸ್ಟ್ ಗೇಟನ್ನು ಮುಚ್ಚಲಾಗಿಲ್ಲದ್ದರಿಂದಲೇ ಈ ಮಟ್ಟದ ಹಾನಿಯಾಗಿದೆ ಎಂದು ಕಾರ್ಮಿಕರು ತಿಳಿಸಿದ್ದಾರೆ.

 

ತಡೆಗೋಡೆ ಬಿದ್ದ ಸ್ಥಳದಲ್ಲೇ ಹರಿದು ಬರುತ್ತಿರುವ ನೀರನ್ನು ತಡೆಗಟ್ಟಲು ತಾತ್ಕಾಲಿಕ ತಡೆಗೋಡೆಯನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿದ್ದಲ್ಲದೇ ಜನರೇಟರ್‌ಗಳ ಸಹಾಯದಿಂದ ಕ್ರೆಸ್ಟ್ ಗೇಟ್‌ಗಳನ್ನು ಮುಚ್ಚುವ ಪ್ರಯತ್ನ ನಡೆದಿದೆ.

 

ಘಟನೆಗೆ ಯಾರೂ ಹೊಣೆಗಾರರಲ್ಲ ಹಾಗೂ ನಿಸರ್ಗದ ಆಟದ ಎದುರು ಯಾರ ಆಟವೂ ನಡೆಯುವುದಿಲ್ಲ. ಸ್ಥಾವರ ಯಥಾಸ್ಥಿತಿಗೆ ಮರಳಲು ಕನಿಷ್ಟಪಕ್ಷ ಇನ್ನೆರಡು ತಿಂಗಳಾದರೂ ಬೇಕು ಎಂದು ಸ್ಥಾವರದ ಮುಖ್ಯ ನಿರ್ವಾಹಕ ಎಂ.ಎಸ್.ರಾಘವೇಂದ್ರ ಅಭಿಪ್ರಾಯ ಪಟ್ಟಿದ್ದಾರೆ.

 

ಸ್ಥಾವರದಲ್ಲಿ ೫ ಕಂಪ್ಯೂಟರ್‌ಗಳು, ೨೨ ಕುರ್ಚಿಗಳು, ೮ ಜನರೇಟರ್‌ಗಳು ಸೇರಿದಂತೆ ಇನ್ನೂ ಹತ್ತು ಹಲವಾರು ಪರಿಕರಗಳು ನೀರು ಪಾಲಾಗಿವೆ ಎಂದು ತಿಳಿಸಿದ್ದಾರೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com