ಮುಂಬೈ: ದಾವೂದ್‌ಗೆ ಸೇರಿದ ಕಟ್ಟಡ ನೆಲಸಮ
ಮುಂಬಯಿ : ಮಾಫಿಯಾ
ಡಾನ್ ದಾವೂದ್ ಇಬ್ರಾಹಿಂ ಕೈವಾಡ ಹೊಂದಿದೆಯೆಂಬ ಕಾರಣಕ್ಕೆ ಬೃಹನ್ಮುಂಬಯಿ ಕಾರ್ಪೊರೇಶನ್
ಇಲ್ಲಿನ ಸಾರಾ ಸಹರಾ ಮತ್ತು ಮುಂಬಯಿಯ ಮಮಿನ್ ಕಾಂಪ್ಲೆಕ್ಸ್‌ಗಳನ್ನು ಕೆಡವುವ
ಕಾರ್‍ಯವನ್ನಾರಂಭಿಸಿದೆ.
ಬೃಹತ್ ಪೊಲೀಸ್ ಸಮೂಹದ
ಭದ್ರತೆಯ ನಡುವೆ ಬುಲ್ಡೋಜರ್‌ಗಳು ಕಟ್ಟಡಗಳನ್ನು ಕೆಡವಲಾರಂಭಿಸಿವೆ. ಈ
ಕೆಡವುವ ಕಾರ್‍ಯಕ್ಕೆ ಸುಮಾರು ೨೦೦ ಸಿಬ್ಬಂದಿಗಳನ್ನು ಮೀಸಲಿರಿಸಲಾಗಿದೆ. ಸರಿಯಾದ
ದಾಖಲೆ ಪತ್ರಗಳಿಲ್ಲದ ಈ ಕಟ್ಟಡಗಳು ಕಾನೂನು ಬಾಹಿರವಾಗಿವೆ ಎಂಬ ಕಾರಣಕ್ಕೆ ಅವುಗಳನ್ನು
ನೆಲಸಮ ಮಾಡಲಾಗಿದೆ. ಕಳೆದ ಮೇ ತಿಂಗಳಲ್ಲಿ ಅಕ್ರಮ ಕಟ್ಟಡಗಳನ್ನು
ಕೆಡವುವಂತೆ ಸುಪ್ರೀಂ ಕೋರ್ಟ್ ಆದೇಶಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ತೆಮ್ಕಾರ್
ಸ್ಟ್ರೀಟ್‌ನಲ್ಲಿರುವ ಮೆಹಜಬೀನ್ ಕಟ್ಟಡ ಕೂಡ ದಾವೂದ್‌ಗೆ ಸೇರಿದ್ದು, ಅದನ್ನು
೧೯೯೫ರಲ್ಲೇ ಕೆಡವಲಾಗಿತ್ತು. ದಾವೂದ್ ಮುಂಬಯಿಯಲ್ಲಿ ಸುಮಾರು ೧೨ ಕಡೆ ಆಸ್ತಿಗಳನ್ನು
ಹೊಂದಿರುವುದಾಗಿ ಪೊಲೀಸರು ಹೇಳಿದ್ದಾರೆ.