ಬೆಂಗಳೂರಲ್ಲಿ ಸಂಪ್ರದಾಯ-ಕಾಸ್ಮೊಪಾಲಿಟನ್
ಬೆಂಗಳೂರು: ಭಾರತದ
ಸಿಲಿಕಾನ್ ಕಣಿವೆ, ಅನೇಕ ಪ್ರತಿಷ್ಟಿತ ಕಂಪೆನಿಗಳಿಗೆ ಆಶ್ರಯ ನೀಡಿರುವ ಬೆಂಗಳೂರು ಈಗ
ಸಂಪ್ರಾದಾಯಿಕ ಹಾಗೂ ಕಾಸ್ಮೊಪಾಲಿಟನ್ ಎಂಬ ಎರಡು ಸಂಸ್ಕೃತಿಗಳ ವೈರುದ್ಧ್ಯದ ನಡುವೆ
ಸಿಲುಕಿ ಇಬ್ಬಾಗವಾಗುವ ಸಾಧ್ಯತೆಯಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ
ಅಧ್ಯಕ್ಷ ಡಾ. ಸಿದ್ಧಲಿಂಗಯ್ಯ ಈ ಬಗ್ಗೆ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿ, ಕನ್ನಡಿಗರಿಗೆ
ಐಟಿ ಕ್ಷೇತ್ರದಲ್ಲಿ ಪ್ರಾಧಾನ್ಯ ದೊರೆಯುತ್ತಿಲ್ಲ, ನಮ್ಮ ನಾಡಿನ ನೆಲ, ಸಂಪನ್ಮೂಲಗಳನ್ನು
ಬಳಸಿಕೊಂಡು ಕನ್ನಡಿಗರಿಗೆ ಕೆಲಸ ಕೊಡುತ್ತಿಲ್ಲ ಎಂದು ಐಟಿ ಕಂಪೆನಿಗಳ ವಿರುದ್ಧ ಆಕ್ರೋಶ
ವ್ಯಕ್ತಪಡಿಸಿದ್ದಾರೆ.
ಕಳೆದ ಐದು ವರ್ಷದಲ್ಲಿ
ಎಷ್ಟು ಜನ ಕನ್ನಡಿಗರಿಗೆ ಕೆಲಸ ಐಟಿ ಕಂಪೆನಿಗಳು ಕೊಟ್ಟಿದ್ದಾರೆ ಎಂಬ ಅಂಕಿ ಅಂಶವನ್ನು ಸುದ್ದಿಗೋಷ್ಠಿಯಲ್ಲಿ
ವಿವರಿಸಿದರು. ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಗೊಳಿಸಬೇಕು. ಕನ್ನಡಿಗರಿಗೆ
ಆದ್ಯತೆ ಸಿಗಬೇಕು ಎಂದು ಅವರು ಹೇಳಿದರು.
ಕರ್ನಾಟಕ ಔದ್ಯೋಗಿಕ
ಸಂಘದ ಅಧ್ಯಕ್ಷ ಬಿ.ಸಿ. ಪ್ರಭಾಕರ್ ಪ್ರಕಾರ ಐಟಿ ಕಂಪೆನಿಗಳು ಹೆಚ್ಚಾದಂತೆ ಉದ್ಯೋಗ
ಅವಕಾಶಗಳು ಹೆಚ್ಚಿವೆ. ಹೊರಗಡೆಯಿಂದ ಬಂದವರೂ ಕೂಡ ಕನ್ನಡಿಗರಿಗೆ ಕೆಲಸ
ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.