ಚೆಲ್ಲು ಪ್ರವೃತ್ತಿಯೇ
ಜೀವಕ್ಕೆ ಕುತ್ತಾಯಿತೇ ?
ಬೆಂಗಳೂರು :
ಕಾಲ್ ಸೆಂಟರ್ ಉದ್ಯೋಗಿ ತಾನಿಯಾ ಕೊಲೆ ಪ್ರಕರಣದಲ್ಲಿ ತನ್ನ ಪಾತ್ರವಿರುವುದಾಗಿ
ಆಕೆಯ ಪ್ರಿಯಕರ ಗುರುರಾಜ್ ಕಿಶೋರ್ ಪೊಲೀಸರೆದುರು ಒಪ್ಪಿಕೊಂಡಿದ್ದಾನೆ. ರಾಜಾಜಿನಗರದಲ್ಲಿರುವ
ಮನೆಗೆ ಮಧ್ಯರಾತ್ರಿ ಬರುತ್ತಿರುವಾಗ ಅವನನ್ನು ಪೊಲೀಸರು ಬಂಧಿಸಿದರು.
ಆರೋಪಿಯ ಬಳಿಯಿದ್ದ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಸ್ವೇಚ್ಛಾಚಾರದ ಬದುಕನ್ನು
ಇಷ್ಟಪಡುತ್ತಿದ್ದ ತಾನಿಯಾ ಬ್ಯಾನರ್ಜಿಗೆ ಬೇರೆ ಯುವಕರ ಜೊತೆ ಸಂಪರ್ಕವಿತ್ತು.
ಸಿಗರೇಟು ಮತ್ತು ರಾತ್ರಿ ಪಬ್‌ಗೆ ತೆರಳುವ ಹವ್ಯಾಸ ಆಕೆಗಿತ್ತು. ಇವು ನನಗೆ
ಇಷ್ಟವಾಗುತ್ತಿರಲಿಲ್ಲ. ಪದೇ ಪದೇ ಬುದ್ಧಿಮಾತು ಹೇಳುತ್ತಿದ್ದರೂ ಅವಳು ತಪ್ಪನ್ನು
ತಿದ್ದಿಕೊಳ್ಳಲಿಲ್ಲ. ಹೀಗಾಗಿ ಅವಳ ವರ್ತನೆಗೆ ಬೇಸತ್ತು ಕೊಲೆ ಮಾಡುವ ಸಂಚು ರೂಪಿಸಿದೆ
ಎಂದು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಕಿಶೋರ್ ಹೇಳಿದ್ದಾನೆ.
ಕೊಲೆ ಮಾಡುವ
ಉದ್ದೇಶದಿಂದಲೇ ಮಂಗಳೂರಿಗೆ ಕರೆದೊಯ್ಯುವುದಾಗಿ ನಂಬಿಸಿ ಅವಳನ್ನು ಕಾರಿನಲ್ಲಿ
ಹತ್ತಿಸಿಕೊಂಡ ಆರೋಪಿ ಕಿಶೋರ್, ನೀನು ಸ್ನೇಹಿತರ ಜೊತೆ ಓಡಾಡುವುದು ನನಗೆ
ಇಷ್ಟವಿಲ್ಲ ಎಂದಿದ್ದಾನೆ. ಇದರಿಂದ ಸಿಟ್ಟುಗೊಂಡ ಆಕೆ ಇವನ ಕೆನ್ನೆಗೆ ಬಾರಿಸಿದಳು. ವ್ಯಗ್ರಗೊಂಡ
ಕಿಶೋರ್ ೩೬ ಬಾರಿ ಆಕೆಗೆ ತಿವಿದು ಕೊಂದ ಬಳಿಕ ಕಾರಿನಲ್ಲಿ ಶವ ಹಾಕಿಕೊಂಡು ಶಿರಾಡಿ ಘಾಟ್ ಬಳಿ
ಶವವನ್ನು ಎಸೆದೆ ಎಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ.