Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಪ್ರಧಾನಿ ನಿವಾಸದೆದುರು ಪ್ರತ್ಯಕ್ಷವಾದ ಕಾರು

ನವದೆಹಲಿ: ಇಬ್ಬರು ಯುವತಿಯರು ಮತ್ತು ಓರ್ವ ಯುವಕನಿದ್ದ ಕಾರೊಂದು ಏಕಾಏಕಿ ಪ್ರಧಾನಿ ಮನಮೋಹನ್ ಸಿಂಗ್‌ರ ನಿವಾಸದೆದುರು ಪ್ರತ್ಯಕ್ಷವಾದ ಪರಿಣಾಮವಾಗಿ ಗುರುವಾರ ಭದ್ರತಾ ಸಿಬ್ಬಂದಿ ಒಂದು ಕ್ಷಣ ವಿಚಲಿತಗೊಳ್ಳುವಂತಾಯಿತು.

 

ಪ್ರಮುಖ ಪ್ರವೇಶ ದ್ವಾರದಲ್ಲಿ ಭದ್ರತಾ ವ್ಯವಸ್ಥೆಯಿದ್ದರೂ ಅದನ್ನು ಭೇದಿಸಿ ಕಪ್ಪು ಬಣ್ಣದ ವಿಲಾಸಿ ಕಾರು ನಂ.೭, ರೇಸ್‌ಕೋರ್ಸ್ ರಸ್ತೆಯಲ್ಲಿ ಪ್ರತ್ಯಕ್ಷವಾಯಿತು. ರಕ್ಷಣಾ ಪಡೆಯವರು ಕಾರನ್ನು ತಡೆದಾಗ ಅದರೊಳಗಿದ್ದವರು ತಾವು ಪ್ರಧಾನಿಯನ್ನು ಭೇಟಿಯಾಗಲು ಬಂದಿರುವುದಾಗಿ ತಿಳಿಸಿದರು. ಬಳಿಕ ಅವರನ್ನು ಹಿಂದಕ್ಕೆ ಕಳುಹಿಸಲಾಯಿತಾದರೂ, ಇಪ್ಪತ್ತು ವಯಸ್ಸಿನ ಆಸುಪಾಸಿನವರಾಗಿದ್ದ ಮೂವರ ಈ ವರ್ತನೆ ಭದ್ರತಾ ಸಿಬ್ಬಂದಿಯವರಿಗೆ ಆತಂಕ ತರಿಸಿತು. ಕಾರಿನೊಳಗಿದ್ದವರು ಮಧ್ಯಪಾನ ಮಾಡಿರುವುದಾಗಿ ತಿಳಿಸಿದ ಭದ್ರತಾ ಸಿಬ್ಬಂದಿ ಕಾರಿನ ಮೇಲೆ ಒಂದು ಕಣ್ಣಿಡುವಂತೆ ದೆಹಲಿ ಪೊಲೀಸರಿಗೆ ತಾಕೀತು ಮಾಡಿದ್ದಾರೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com