ಕಾಲ್ ಸೆಂಟರ್
ಉದ್ಯೋಗಿ ತಾನಿಯಾ ಹತ್ಯೆಯ ಹಿನ್ನೆಲೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ
ಉತ್ತರಿಸುತ್ತಾ ಕುಮಾರಸ್ವಾಮಿ ಮಾತನಾಡುತ್ತಿದ್ದರು. ಸರಕಾರಕ್ಕಾಗಲಿ, ಇತರ ಕಂಪೆನಿಗಳಿಗಾಗಲಿ
ಎಲ್ಲಾ ಸಮಯದಲ್ಲೂ ತಮ್ಮ ಉದ್ಯೋಗಿಗಳಿಗೆ ಭದ್ರತೆಯನ್ನು ಕೊಡಲು ಸಾಧ್ಯವಾಗುವುದಿಲ್ಲ.
ತನ್ನ ರಕ್ಷಣೆಗಾಗಿ ಜವಾಬ್ದಾರಿಯಿಂದ ವೈಯಕ್ತಿಕ ಕಾಳಜಿ ತೆಗೆದುಕೊಳ್ಳುವುದು ಪ್ರತಿಯೊಬ್ಬ
ಮಹಿಳೆಯ ಕರ್ತವ್ಯ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಈ ಹಿಂದೆ ಧರಂ ಸಿಂಗ್
ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರಿಗೆ ರಾತ್ರಿ ಪಾಳಯವನ್ನು ನಿಷೇಧಿಸುವ ಬಗ್ಗೆ
ಕಾಯಿದೆ ಮಾಡುತ್ತೇನೆ ಎಂದು ಹೇಳಿರುವುದರ ಬಗ್ಗೆ ತನಗೇನೂ ತಿಳಿದಿಲ್ಲ ಎಂದ ಮುಖ್ಯಮಂತ್ರಿ,
ಅಂತಹ ಪ್ರಯತ್ನಗಳು ಪ್ರಾಯೋಗಿಕವಾಗಿ ಯಶಸ್ವಿಯಾಗುವುದಿಲ್ಲ, ಆದ್ದರಿಂದ ರಾತ್ರಿ
ಪಾಳಯವನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.