Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ನಾಗಾರ್ಜುನ ಯೋಜನೆಗೆ ಸರ್ಕಾರ ಅಸ್ತು

ದಾವಣಗೆರೆ: ನಾಗಾರ್ಜುನ ಯೋಜನೆಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

 

ದಕ್ಷಿಣ ಕನ್ನಡಜಿಲ್ಲೆಯ ಮುಲ್ಕಿ ಸಮೀಪದ ನಂದಿಕೂರು ಗ್ರಾಮದಲ್ಲಿ ನಾಗಾರ್ಜುನ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೊಳ್ಳುವ ಸಾಧ್ಯತೆಯಿದೆ.

 

ಪ್ರಸ್ತುತ ರಾಜ್ಯದಲ್ಲಿ ವಿದ್ಯುತ್‌ಗೆ ಬೇಡಿಕೆಯಿದ್ದು ಅಗತ್ಯವಿರುವ ಎಲ್ಲಾ ರೀತಿಯ ಸಂಪನ್ಮೂಲಗಳ ಬಳಕೆ ಮಾಡಿ ಶಕ್ತಿ ಉತ್ಪಾದನೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಹರಿಹರದಲ್ಲಿ ಸುದ್ದಿಗಾರರಿಗೆ ಹೇಳಿದರು.

 

ನಾಗಾರ್ಜುನ ಯೋಜನೆಗೆ ವಿರೋಧ ವ್ಯಕ್ತಪಡಿಸುವ ಪರಿಸರವಾದಿಗಳ ನಡುವೆ ಈಗಾಗಲೇ ಮಾತುಕತೆ ಜಾರಿಯಲ್ಲಿದ್ದು ಪರಿಸ್ಥಿತಿಯ ಮನವರಿಕೆ ಮಾಡಿಕೊಡಲಾಗುವುದು ಎಂದರು.

 

ನಾಗಾರ್ಜುನ ಕಂಪೆನಿಯ ಜೊತೆಗಿನ ಒಪ್ಪಂದಂತೆ ಪ್ರತಿ ಯೂನಿಟ್‌ಗೆ ೨.೨೦ ರೂ. ದರದಂತೆ ಸರ್ಕಾರಕ್ಕೆ ವಿದ್ಯುತ್ ಶಕ್ತಿಯನ್ನು ಸರಬರಾಜು ಮಾಡಲಾಗುವುದು. ಸಂಕಷ್ಟದ ಪರಿಸ್ಥಿತಿಯಲ್ಲಿ ಪ್ರತಿ ಯೂನಿಟ್‌ಗೆ ೭ ರೂ. ದರದಲ್ಲಿ ಸರ್ಕಾರ ಖರೀದಿ ಮಾಡಿತ್ತು.

 

ಮಹಾರಾಷ್ಟ್ರ ಕರ್ನಾಟಕ ಗಡಿ ವಿಷಯದಲ್ಲಿ ಕೆ.ಸಿ. ರೆಡ್ಡಿ ಸಮಿತಿಯ ವರದಿಯೇ ಅಂತಿಮವಾದದ್ದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com