ನವದೆಹಲಿ : ಮುಚ್ಚಲ್ಪಟ್ಟಿರುವ
ಕೋಲಾರದ ಚಿನ್ನದ ಗಣಿ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್‌ಗೆ ಪುನರ್ಜನ್ಮ ನೀಡಿ ಮುನ್ನಡೆಸುವಂತೆ
ಗಣಿ ಕಾರ್ಮಿಕರಿಗೆ ಕಾರ್ಯ ನಿರ್ವಹಿಸಲು ಮತ್ತೊಂದು ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ
ನಿರ್ಧರಿಸಿದೆ.
ಈ ಬಗ್ಗೆ ಕೇಂದ್ರ ಸರ್ಕಾರ
ನಿನ್ನೆ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೇಂದ್ರಿಯ ವಾರ್ತಾ
ಸಚಿವ ಪ್ರಿಯರಂಜನ್ ದಾಸ್ ಮುನ್ಷಿಯವರು ತಿಳಿಸಿದ್ದಾರೆ.
ಭಾರತ್ ಗೋಲ್ಡ್ ಮೈನ್ಸ್‌ನ
ಆಸ್ತಿ-ಪಾಸ್ತಿಗಳ ಖರೀದಿಗೆ ಸಧ್ಯದಲ್ಲೇ ಜಾಗತಿಕ ಟೆಂಡರ್‌ಗಳನ್ನು ಕರೆಯಲಾಗುವುದು
ಎಂದು ತಿಳಿಸಿದ ಅವರು, ಅತಿ ಹೆಚ್ಚು ಮೊತ್ತದ ಟೆಂಡರ್ ಯಾವುದೇ ಬಂದರೂ ಸಂಸ್ಥೆಗೆ
ಗಣಿಯ ಸಂಪೂರ್ಣ ನಿರ್ವಹಿಸಲು ಅವಕಾಶ ನೀಡಲಾಗುವುದು ಎಂದರು.
`ಒಂದು ಪಕ್ಷ
ಕಾರ್ಮಿಕ ಸಂಘಟನೆಗಳು ಬಿಡ್ ಮಾಡಲು ನಿರಾಕರಿಸಿದ ಪಕ್ಷದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್
ಮಾಡಿದವರಿಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗುವುದು' ಎಂದು ಸಚಿವರು ಪ್ರಶ್ನೆಯೊಂದಕ್ಕೆ
ಉತ್ತರಿಸಿದ್ದಾರೆ.
ಜಾಗತಿಕ ಟೆಂಡರ್ ಪ್ರಕ್ರಿಯೆ
ಕುರಿತಂತೆ ಸಧ್ಯದಲ್ಲೇ ಕೇಂದ್ರ ಸಚಿವಾಲಯದ ಸಮಿತಿಯನ್ನು ರಚಿಸಲಾಗುವುದು
ಎಂದು ಹೇಳಿದ್ದಾರೆ.
ಕೋಲಾರದ ಚಿನ್ನದ
ಗಣಿ ಮುಚ್ಚಲು ತೀರ್ಮಾನಿಸಿದ್ದರ ಹಿನ್ನೆಲೆಯಲ್ಲಿ ೨೦೦೨ರಲ್ಲೇ ಕಾರ್ಮಿಕರಿಗೆ ಸ್ವಯಂ ನಿವೃತ್ತಿ
ಯೋಜನೆಯೊಂದನ್ನು ಪ್ರಕಟಿಸಲಾಗಿತ್ತು. ಆದರೆ ಅದರ ಲಾಭವನ್ನು ಕೇವಲ ೩೦೦
ಕಾರ್ಮಿಕರು ಪಡೆದಿದ್ದು ಇನ್ನುಳಿದ ೩೧೦೦ ಕಾರ್ಮಿಕರು ಯೋಜನೆಯನ್ನು
ತಿರಸ್ಕರಿಸಿದರು.
ಹೀಗಾಗಿ ಸ್ವಯಂ ನಿವೃತ್ತಿ
ಯೋಜನೆಯನ್ನು ಇನ್ನೂ ಒಂದು ತಿಂಗಳ ಕಾಲ ಕಾರ್ಮಿಕರಿಗೆ ಮತ್ತೆ ತೆರೆದಿಡುವುದರ
ಬಗ್ಗೆ ಸಚಿವ ಸಂಪುಟದ ಸಭೆ ನಿರ್ಧರಿಸಿದೆ.