Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಮುಖ್ಯಮಂತ್ರಿಯ ಮೇಲೆ ಡಿಕೆಶಿಯ ಹೊಸ ಆರೋಪ

ಬೆಂಗಳೂರು : ಸಮ್ಮಿಶ್ರ ಸರ್ಕಾರದ ಅಂಗಪಕ್ಷವಾದ ಭಾರತೀಯ ಜನತಾ ಪಕ್ಷದ ವಿಧಾನ ಪರಿಷತ್ ಸದಸ್ಯ ಜನಾರ್ಧನ ರೆಡ್ಡಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಹಾಗೂ ಅವರ ಕುಟುಂಬದ ಸದಸ್ಯರು ಗಣಿಲಂಚ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನುವ ಆರೋಪ ಇನ್ನೂ ಹಸಿಯಾಗಿರುವಾಗಲೇ, ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಮಾಜಿಸಚಿವ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಸಹೋದರ ಡಾ|| ಎಚ್.ಡಿ.ರಮೇಶ್ ಅವರ ಮೇಲೆ ೪೦ ಕೋಟಿಗೂ ಹೆಚ್ಚು ಬೆಲೆಬಾಳುವ ಕಬ್ಬಿಣದ ಅದಿರನ್ನು ಅಕ್ರಮವಾಗಿ ಹೊರದೇಶಗಳಿಗೆ ಸಾಗಿಸಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.

 

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಅಕ್ರಮ ಗಣಿಗಾರಿಕೆಯ ತನಿಖೆಯನ್ನು ಸಂಪೂರ್ಣವಾಗಿ ಸಿಬಿಐಗೆ ಒಪ್ಪಿಸಿ ತನಿಖೆ ಮಾಡಿಸಬೇಕೆಂದು ಆಗ್ರಹಿಸಿದ್ದಾರೆ.

 

ಮುಖ್ಯಮಂತ್ರಿಯವರೇ ಸದನದ ಒಳಗಡೆಯೇ ತಾವಾಗಲೀ ಅಥವಾ ತಮ್ಮ ಕುಟುಂಬದ ಸದಸ್ಯರಾಗಲೀ ಯಾವುದೇ ರೀತಿಯಲ್ಲೂ ಕೂಡ ಗಣಿಗಾರಿಕೆಯಲ್ಲಿ ಪಾಲ್ಗೊಂಡಿರುವುದಿಲ್ಲ ಎಂಬಂತಹ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲೇ ಮಾಜಿಸಚಿವ ಡಿ.ಕೆ.ಶಿವಕುಮಾರ್ ಅವರು ಬಿಡುಗಡೆಗೊಳಿಸಿರುವ ಕಬ್ಬಿಣದ ಅದಿರನ್ನು ಡಾ|| ಎಚ್.ಡಿ. ರಮೇಶ್ ಅವರ ನೇತೃತ್ವದ ಬಿಎಸ್‌ಕೆ ಟ್ರೇಡಿಂಗ್ ಇಂಕ್ ಸಂಸ್ಥೆಯ ದಾಖಲೆಗಳು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

 

`ಬಿಎಸ್‌ಕೆ ಟ್ರೇಡಿಂಗ್ ಇಂಕ್ ಎಂಬಂತಹ ಸಂಸ್ಥೆಯನ್ನು ೨೦೦೦ನೇ ಇಸವಿಯಲ್ಲಿ ಹುಟ್ಟುಹಾಕಿರುವ, ಸಂಸ್ಥೆ ಕೇವಲ ಕಳೆದ ಮೂರು ತಿಂಗಳುಗಳಲ್ಲಿ ೪೦ ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಕಬ್ಬಿಣದ ಅದಿರನ್ನು ಈಗಾಗಲೇ ರಫ್ತು ಮಾಡಿದೆ ಎಂದು ಅವರು ಆರೋಪ ಮಾಡಿದ್ದಾರೆ.

 

ಇದಲ್ಲದೇ ಆರು ಲಕ್ಷಕ್ಕೂ ಮೀರಿದ ಕಬ್ಬಿಣದ ಅದಿರು ರಾಜ್ಯದ ವಿವಿಧ ಬಂದರುಗಳಲ್ಲಿ ಅದರಲ್ಲೂ ಪ್ರಮುಖವಾಗಿ ಮಂಗಳೂರು ಬಂದರೊಂದರಲ್ಲೇ ನೂರು ಕೋಟಿ ರೂಪಾಯಿಗಳಿಗೂ ಮೀರಿದ ಅಕ್ರಮ ಗಣಿಗಾರಿಕೆಯಿಂದ ನೇರವಾಗಿ ಮಾಜಿ ಪ್ರಧಾನಿ ದೇವೇಗೌಡರ ಪುತ್ರ ಡಾ||ರಮೇಶ್ ಅವರ ಮೇಲೆ ಆರೋಪಗಳ ಸುರಿಮಳೆಯನ್ನೇ ಸುರಿದಿದ್ದಾರೆ.

 

ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟುವ ನೆಪವನ್ನೊಂದೇ ಮುಂದಿಟ್ಟುಕೊಂಡು ಸಕ್ರಮ ಗಣಿಗಾರಿಕೆಯನ್ನು ಸರ್ಕಾರ ಮುಚ್ಚಲು ಹೊರಟಿರುವುದರ ಮೂಲ ಉದ್ದೇಶವೇ ತಮ್ಮ ರಾಜಕೀಯ ಎದುರಾಳಿಗಳ ಸಕ್ರಮ ಗಣಿಗಾರಿಕೆಯನ್ನು ಮುಚ್ಚುತ್ತಿದ್ದಾರೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರ ಮೇಲೆ ಆರೋಪ ಮಾಡಿದ್ದಾರೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com