ಕೇರಳದಲ್ಲಿ ಬಸವನಹುಳು
ಸುಡುವ ಆಂದೋಲನ
ವಡಕ್ಕಾರ:
ಉತ್ತರ ಕೇರಳದಲ್ಲಿ ೫೦,೦೦೦ ಕ್ಕೂ ಅಧಿಕ ಭಾರಿ ಗಾತ್ರದ ಬಸವನ ಹುಳುಗಳ ನಿರ್ಮೂಲನ
ಕಾರ್ಯ ನಡೆದಿದೆ.
ಬೃಹತ್ ಗಾತ್ರದ
ಹುಳುಗಳು ವಡಕ್ಕಾರ್‌ನ ಅಳಿಯೂರು ಗ್ರಾಮದ ಜನತೆಗೆ ತಲೆನೋವಾಗಿ ಪರಿಣಮಿಸಿದ್ದ
ಕಾರಣ ಈ ಕಾರ್ಯ ಕೈಗೊಳ್ಳಲಾಗಿದೆ. ಬಸವನ ಹುಳುವಿನ ದಂಡು, ಫಸಲಿಗೆ ಬಂದ
ಬೆಳೆಗಳು ಹಾಗೂ ತೆಂಗಿನ ಮರಕ್ಕೆ ಮುತ್ತಿಗೆ ಹಾಕಿ ನಾಶ ಮಾಡುತ್ತಿದ್ದವು.
ಇತ್ತೀಚೆಗೆ
ಗ್ರಾಮಸ್ಥರು ಸಂಘಟಿತರಾಗಿ ೫೦,೦೦೦ ಹುಳುಗಳಿಗೆ ಮುಕ್ತಿ ತೊರಿಸಿದ್ದಾರೆ. ೩ ವರ್ಷದಿಂದ ಈ
ಸಮಸ್ಯೆ ಎದುರಿಸುತ್ತಿದ್ದು ಕೃಷಿ ತಜ್ಞರು ಪರಿಹಾರ ನೀಡಲು ಅಸಮರ್ಥರಾದ ಕಾರಣ ಜನರು
ಹುಳುಗಳನ್ನು ಸಂಗ್ರಹಿಸಿ ಸೀಮೆಎಣ್ಣೆ, ಉಪ್ಪು ಹಾಕಿ ಸುಡುತ್ತಿದ್ದಾರೆ ಎಂದು ಸ್ಥಳೀಯ
ಮುಖಂಡ ಎಂ. ಕೆ. ಪ್ರೇಮನಾಥ್ ತಿಳಿದ್ದಾರೆ.
ಜನರ ಸಹಕಾರದಿಂದ
ಈಗ ಬಸವನಹುಳುಗಳ ಕಾಟ ಕಮ್ಮಿಯಾಗಿದೆ. ಮುಂಬರುವ ದಿನಗಳಲ್ಲಿ ಹುಳುಗಳಿಂದ
ನಮ್ಮ ಗ್ರಾಮವನ್ನು ಮುಕ್ತಗೊಳಿಸುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.