ಗಣಿಲಂಚ: ರಾಜ್ಯಪಾಲರಿಂದ
ಕೇಂದ್ರಕ್ಕೆ ವರದಿ
ಹಿಂದಿನ ಸರಕಾರದ ನಿರ್ಲಕ್ಷ್ಯದ ಬಗ್ಗೆ ವರದಿಯಲ್ಲಿ ಉಲ್ಲೇಖ
ಬೆಂಗಳೂರು :
ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಗಣಿಲಂಚ ಪ್ರಕರಣದ ಸಮಗ್ರ ವರದಿಯನ್ನು
ರಾಷ್ಟ್ರಪತಿ ಮತ್ತು ಕೇಂದ್ರ ಸರ್ಕಾರಕ್ಕೆ ರಾಜ್ಯಪಾಲ ಟಿ.ಎನ್.ಚತುರ್ವೇದಿ ನೀಡಿದ್ದಾರೆ.
ಸುಮಾರು ೨೬೫
ಪುಟಗಳಷ್ಟಿರುವ ವರದಿಯಲ್ಲಿ ಗಣಿಗಾರಿಕೆ ಕುರಿತಂತೆ ಕಂದಾಯ, ಅರಣ್ಯ ಮತ್ತು ಪರಿಸರ,
ಗಣಿ ಮತ್ತು ಭೂವಿಜ್ಞಾನ ಮಾಲಿನ್ಯ ಇಲಾಖೆಗಳಿಂದ ತರಿಸಿಕೊಂಡ ವರದಿಗಳೂ ಸೇರಿವೆ.
ಅಕ್ರಮ ಗಣಿಗಾರಿಕೆ ನಿಯಂತ್ರಿಸುವಲ್ಲಿ ಹಿಂದಿನ ಸರಕಾರದ ನಿರ್ಲಕ್ಷ್ಯವನ್ನು ವರದಿಯಲ್ಲಿ
ಉಲ್ಲೇಖಿಸಲಾಗಿದೆ.
ಆದರೆ ಯಾರ ಬಗ್ಗೆಯೂ
ವೈಯುಕ್ತಿಕ ನಿಂದನೆಯಾಗಲೀ ಅರೋಪವಾಗಲೀ ಇಲ್ಲ. ಇತ್ತೀಚಿನ ಆರೋಪ- ಪ್ರತ್ಯಾರೋಪದ
ಹಿನ್ನೆಲೆಯಲ್ಲಿ ಇಡೀ ಅಕ್ರಮ ಗಣಿಗಾರಿಕೆಯ ಕುರಿತಂತೆ ಸಮಗ್ರ ತನಿಖೆಗೆ
ಒತ್ತಾಯಿಸುವುದರ ಜೊತೆಗೆ ಸಮಗ್ರ ಗಣಿ ನೀತಿ ರೂಪಿಸಲು ವರದಿ ಸಲಹೆ ನೀಡಿದೆ.