ಮತ್ತೊಬ್ಬ ಕಾಲ್ ಸೆಂಟರ್ ಯುವತಿಯ ಕೊಲೆ
ಬಾಯ್ ಫ್ರೆಂಡ್‌ನಿಂದಲೇ ಮೋಸ ಹೋದ ತಾನಿಯಾ
ಬೆಂಗಳೂರು/ಸಕಲೇಶಪುರ
: ಪ್ರತಿಭಾ ಕೊಲೆಯ ನೆನಪು ಇನ್ನೂ ಹಸಿಯಿರುವಾಗಲೇ ಪಶ್ಚಿಮ ಬಂಗಾಳ ಮೂಲದ
ಇನ್ನೋರ್ವ ಕಾಲ್ ಸೆಂಟರ್ ಯುವತಿ ಮಂಗಳವಾರ ಕೊಲೆಯಾಗಿದ್ದಾಳೆ.
ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ
ಅವಿವಾ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ತಾನಿಯಾ ಬ್ಯಾನರ್ಜಿಯ ಶವ ಸಕಲೇಶಪುರ
ತಾಲೂಕಿನ ಶಿರಾಡಿ ಘಾಟ್ ಬಳಿ ಪತ್ತೆಯಾಗಿದೆ. ಈಕೆ ಪಶ್ಚಿಮ ಬಂಗಾಳದ ಹೌಡಾದವಳಾಗಿದ್ದು,
ಕಳೆದ ಎರಡುವರೆ ವರ್ಷಗಳಿಂದ ಬೆಂಗಳೂರಿನಲ್ಲಿ ಪೇಯಿಂಗ್ ಗೆಸ್ಟ್ ಆಗಿ ವಾಸವಾಗಿದ್ದಳು.
ಶವದ ಬಳಿ ಕಂಪೆನಿಯ
ಗುರುತಿನ ಚೀಟಿ ಇದ್ದುದರಿಂದ ಆಕೆಯನ್ನು ಗುರುತು ಹಿಡಿಯಲು ಸಾಧ್ಯವಾಯಿತು.
ಆಕೆಯನ್ನು ೩೬ ಬಾರಿ ಇರಿದು ಸಾಯಿಸಲಾಗಿದೆ. ದಿನನಿತ್ಯ ಕಾಲ್ ಸೆಂಟರ್‌ನ ವಾಹನದಲ್ಲೇ ಬಂದು
ಹೋಗುತ್ತಿದ್ದ ತಾನಿಯಾ, ಕಳೆದ ಎರಡು ಮೂರು ದಿನಗಳಿಂದ ಸ್ನೇಹಿತನ ವಾಹನದಲ್ಲಿ
ಓಡಾಡಿಕೊಂಡಿದ್ದಳೆನ್ನಲಾಗಿದೆ. ಆಕೆಯ ಸ್ನೇಹಿತ ಮತ್ತು ಸಹೋದ್ಯೋಗಿಯಾಗಿರುವ ಕಿಶೋರ್‌ನನ್ನು
ಪೊಲೀಸರು ಬಂಧಿಸಿದ್ದಾರೆ.
ಬಿದರಿ ನೇತೃತ್ವ
:
ತಾನಿಯಾ ಕೊಲೆ ಪ್ರಕರಣವನ್ನು
ಬೇಧಿಸಲು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ನೇತೃತ್ವದಲ್ಲಿ ವಿಶೇಷ
ತಂಡವನ್ನು ರಚಿಸಲಾಗಿದೆ.