Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಉಚ್ಚಾಟಿತ ತಂತ್ರಿಸುಳ್ಳು ದೂರು ಕೊಟ್ಟಿದ್ದು ನಿಜ

 ಕೊಚ್ಚಿ : ಲೈಂಗಿಕ ಕಿರುಕುಳದ ಆರೋಪ ಹೊತ್ತು ಸೋಮವಾರ ಉಚ್ಚಾಟಿಸಲ್ಪಟ್ಟ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ತಂತ್ರಿ ಕಂಡರಾರು ಮೋಹನಾರು ಅವರು ನಗ್ನ ಮಹಿಳೆಯೊಂದಿಗೆ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಕೊಟ್ಟಿದ್ದ ದೂರು ಸುಳ್ಳು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

 

ಶಬರಿಮಲೆ ದೇಗುಲದ ಪ್ರಧಾನ ಅರ್ಚಕರಾಗಿರುವ ಕಂಡರಾರು ಮೋಹನಾರು, ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದರೆಂಬ ಪೊಲೀಸರ ಹೇಳಿಕೆಯ ಹಿನ್ನೆಲೆಯಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ ಸೋಮವಾರ ಅವರನ್ನು ಉಚ್ಚಾಟಿಸಿ ಆದೇಶ ಹೊರಡಿಸಿತ್ತು.

 

ಪೊಲೀಸರ ಹೇಳಿಕೆ ಬಂದ ತಕ್ಷಣ ತಮ್ಮ ವಕೀಲರ ಜೊತೆ ಪೊಲೀಸ್ ಠಾಣೆಗೆ ತೆರಳಿದ ಅವರು ಆದಿತ್ಯವಾರ ತಮ್ಮನ್ನು ಯಾರೂ ಅಪಹರಿಸಿರಲಿಲ್ಲ ಬದಲಾಗಿ ಕೆಲಸದಾಕೆಯನ್ನು ಕರೆತರಲು ಸ್ವತ ನಾನೇ ಮಹಿಳೆಯ ಪ್ಲ್ಯಾಟಿಗೆ ಹೋಗಿದ್ದೆ ಎಂದು ಒಪ್ಪಿಕೊಂಡರು.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com