Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಮೈಸೂರಿನಲ್ಲಿ ರಂಗಾಯಣ ಸ್ವಚ್ಛವಾಗಿಲ್ಲವಂತೆ!

ತುಂಬಾ ಜನ ಓಡಾಡುವ ಕಡೆ ಕ್ಲೀನ್ ಮಾಡೋದು ಹೇಗ್ರೀ ?

 ಮೈಸೂರು : ಅಂತರರಾಷ್ಟ್ರೀಯ ಖ್ಯಾತಿ ಹೊಂದಿದ ರಂಗಾಯಣ ಸ್ವಚ್ಛವಾಗಿಲ್ಲ ಎಂಬುದು ರಂಗಭೂಮಿ ಕಲಾವಿದರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಹೊಸ ದೂರು.

 

ಅಲ್ಲಿ ಆಡಳಿತ ನಿರ್ವಹಣೆ ಚೆನ್ನಾಗಿಲ್ಲ. ಅಲ್ಲಿನ ಹೂದೋಟಗಳು ನೀಟಾಗಿಲ್ಲ ಮತ್ತು ಈ ಅವ್ಯವಸ್ಥೆಯ ಬಗ್ಗೆ ಅಲ್ಲಿನ ಅಧಿಕಾರಿಗಳು ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದು ರಂಗಾಯಣದ ಮೇಲಿರುವ ಆರೋಪ.

 

ಇಲ್ಲಿನ ಪತ್ರಿಕೆಯೊಂದು ಈ ಬಗ್ಗೆ ಪುಟ್ಟ ವರದಿ ಪ್ರಕಟಿಸಿದೆ. ರಂಗಾಯಣ ಆವರಣದ ಒಂದು ಬದಿಯಲ್ಲಿ ಒಂದು ರಾಶಿ ಕಸ ತುಂಬಿಕೊಂಡಿದೆ. ಅದನ್ನು ಅಲ್ಲಿಂದ ಸ್ವಚ್ಛಗೊಳಿಸುವಂತೆ ಅಕ್ಕಪಕ್ಕದವರು ಕೋರಿದರೂ ಅದರಿಂದ ಪ್ರಯೋಜನವಾಗಿಲ್ಲ.  ಇದರೊಂದಿಗೆ ಆವರಣದಲ್ಲಿ ಮರವೊಂದು ಬಿದ್ದಿದ್ದು ಅದನ್ನು ಅಲ್ಲಿಂದ ತೆಗೆಯುವ ಬಗ್ಗೆಯೂ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ.  ಈ ನಡುವೆ ಮರದ ವಿಲೇವಾರಿಯ ಹಿನ್ನೆಲೆಯಲ್ಲಿ ಕಟ್ಟಿಗೆ ಕೊಳ್ಳುವಂತೆ ಪತ್ರಿಕೆಯಲ್ಲಿ ಜಾಹೀರಾತು ನೀಡಲಾಗಿತ್ತು. ಆದರೆ ಈ ಜಾಹೀರಾತಿಗೆ ಪ್ರತಿಕ್ರಿಯೆ ಸೊನ್ನೆ. ಆದ್ದರಿಂದ ಮರ ಇನ್ನೂ ಅಲ್ಲಿ ಉಳಿದುಕೊಂಡಿದೆ ಎಂಬುದು ಅಲ್ಲಿನ ಅಧಿಕಾರಿಗಳ ಸಮರ್ಥನೆ.

 

ಇದು ಒಂದು ಸಾರ್ವಜನಿಕ ಸಮಸ್ಯೆ. ರಂಗಾಯಣಕ್ಕೆ ತುಂಬಾ ಜನ ಬಂದು ಹೋಗುವವರು ಇರುತ್ತಾರೆ. ಆದ್ದರಿಂದ ಕನ್ನಡಿಯಂತೆ ಫಳ ಫಳನೆ ಹೊಳೆವ ಹಾಗೆ ರಂಗಾಯಣ ಆವರಣವನ್ನು ಹೇಗೆ ಇಟ್ಟುಕೊಳ್ಳಲಾಗುತ್ತದೆ ಎಂಬುದು ಇಲ್ಲಿನ ಕಲಾವಿದರೊಬ್ಬರ ಪ್ರಶ್ನೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com