|
ಮತ್ತೆ ಭುಗಿಲ್ಲೆದ್ದ ಕರ್ನಾಟಕ ಮಹಾರಾಷ್ಟ್ರ
ಗಡಿ ವಿವಾದ
ರಾಜ್ಯದ
ಗ್ರಾಮಗಳಿಗಾಗಿ ಪ್ರಧಾನಿ ಬಳಿ ಮನವಿ
ನವದೆಹಲಿ :
ಕರ್ನಾಟಕಕ್ಕೆ ಸೇರಿರುವ ೮೬೫ ಗ್ರಾಮಗಳು ಹಾಗು ಬೆಳಗಾವಿ ಸೇರಿದಂತೆ ಆರು
ಪಟ್ಟಣಗಳನ್ನು ತಮ್ಮ ರಾಜ್ಯಕ್ಕೆ ವರ್ಗಾಯಿಸಬೇಕೆಂದು ಮಹಾರಾಷ್ಟ್ರದ ಉನ್ನತ ನಿಯೋಗವೊಂದು
ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮಂಗಳವಾರ ಮನವಿ ಮಾಡಿದೆ.
ಮಹಾರಾಷ್ಟ್ರದ ಸರ್ವಪಕ್ಷದ
ನಿಯೋಗದ ನೇತೃತ್ವ ವಹಿಸಿದ್ದ ರಾಜ್ಯದ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್
ಅವರು ಗಡಿ ಪ್ರಾಂತ್ಯಗಳಲ್ಲಿ ವಾಸಿಸುತ್ತಿರುವ ೨೦ ಲಕ್ಷ ಮರಾಠಿಗರ ಸಾಂಸ್ಕೃತಿಕ ವಧೆಗೆ
ಕರ್ನಾಟಕ ಸರ್ಕಾರ ಕೈ ಹಾಕಿದೆ ಎಂದು ನೇರ ಆರೋಪ ಮಾಡುವ ಮೂಲಕ ಬೂದಿ ಮುಚ್ಚಿದ
ಕೆಂಡದಂತಿದ್ದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಬೆಂಕಿಯನ್ನು ಇನ್ನಷ್ಟು
ಭುಗಿಲೆಬ್ಬಿಸಿದ್ದಾರೆ.
ಸರ್ವ ಪಕ್ಷಗಳ ಬೆಂಬಲದೊಂದಿಗೆ
ಬಂದಿಳಿದ ದೇಶ್‌ಮುಖ್ ಪ್ರಧಾನಿಯವರನ್ನು ಭೇಟಿಯಾಗಿ ಗಡಿ ವಿವಾದ ಶಾಂತತೆಗೆ
ಕೇಂದ್ರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಇದಕ್ಕೆ ಪೂರಕವಾಗಿ
ಸ್ಪಂದಿಸಿದ ಪ್ರಧಾನಿ ಮನಮೋಹನ್ ಸಿಂಗ್ ಸವೋಚ್ಛ ನ್ಯಾಯಾಲಯದಲ್ಲಿ ಗಡಿ ವಿವಾದ
ಕುರಿತಂತೆ ವಿಚಾರಣೆ ಆಗಸ್ಟ್ ೨೧ಕ್ಕೆ ನಡೆಯಲಿದ್ದು, ಇದಕ್ಕೆ ಮುನ್ನವೇ ತನ್ನ ನಿಲುವನ್ನು
ಕೇಂದ್ರ ಸರ್ಕಾರ ಸ್ಪಷ್ಟಪಡಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಇದಕ್ಕೂ ಮುನ್ನ
ದೇಶ್‌ಮುಖ್ ಅವರು ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ
ಗ್ರಾಮಗಳಲ್ಲಿ ಮರಾಠಿ ಶಾಲೆಗಳನ್ನು ಮುಚ್ಚಿಸಿ ಕನ್ನಡ ಶಾಲೆಗಳನ್ನು ಸ್ಥಾಪಿಸುವುದರ
ಮೂಲಕ ಮರಾಠಿ ಸಂಸ್ಕೃತಿಯನ್ನು ಬೆಳೆಯುವ ಮೊದಲೇ ಕೊಲ್ಲುವ ಹವಣಿಕೆ ಕರ್ನಾಟಕ
ಸರ್ಕಾರ ನಡೆಸಿದೆ. ಇದಲ್ಲದೇ ಮರಾಠಿಗರ ಸಂಖ್ಯೆ ಕಡಿಮೆಗೊಳಿಸಲು ಕರ್ನಾಟಕ ಸತತ
ಪ್ರಯತ್ನ ಮಾಡುತ್ತಿದೆ ಮತ್ತು ಕನ್ನಡ ಆಡಳಿತದಿಂದಾಗಿ ಗಡಿ ಭಾಗದ ಮರಾಠಿಗರು
ಬಳಲುತ್ತಿದ್ದಾರೆಂದು ಗಂಭೀರ ಆರೋಪಗಳನ್ನು ಮಾಡಿದೆ.
`ಮರಾಠಿಗರ ಮೇಲೆ
ಇತ್ತೀಚೆಗೆ ಕನ್ನಡ ರಕ್ಷಣಾ ವೇದಿಕೆಯಂತಹ ಸಂಸ್ಥೆಗಳ ಮೂಲಕ ದೌರ್ಜನ್ಯ ನಡೆಸುತ್ತಿದೆ'
ಎಂದು ಆರೋಪಗಳನ್ನು ಮಾಡಿದ್ದಾರೆ.
ಈ ಅನ್ಯಾಯಗಳಿಂದ
ರಕ್ಷಿಸಲು ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಹಾಗೂ ಖಾನಾಪುರ ಪಟ್ಟಣಗಳು
ಹಾಗೂ ೮೫೬ ಹಳ್ಳಿಗಳಲ್ಲಿ ಸುಮಾರು ೨೦ ಮರಾಠಿಗರು ೭೫೦೦ ಚದರ ಕಿ.ಮೀ ಪ್ರದೇಶದಲ್ಲಿ
ವಾಸಿಸುತ್ತಿರುವವರನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಮನವಿ ಮಾಡಿದರು. |