ಛಾಪಾ ಹಗರಣ : ಮಹತ್ವದ ಮಾಹಿತಿ ಬಹಿರಂಗ
ಪುಣೆ : ತೆಲಗಿ ಸೇರಿದಂತೆ
ಛಾಪಾ ಕಾಗದ ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಸಂಭಾಷಣೆಯಿರುವ ಹದಿನಾಲ್ಕು
ಸಿಡಿಗಳು ಮಂಗಳವಾರ ಮಹಾರಾಷ್ಟ್ರದ ವಿಶೇಷ ನ್ಯಾಯಾಲಯದಲ್ಲಿ
ಬಹಿರಂಗಗೊಳ್ಳಲಿವೆ.
ಮಹಾರಾಷ್ಟ್ರ ಸಂಘಟಿತ
ಅಪರಾಧ ನಿಯಂತ್ರಣ ಕಾಯ್ದೆ ವಿಶೇಷ ನ್ಯಾಯಾಧೀಶರಾಗಿರುವ ಚಿತ್ರಾ.ಕೆ.ಬೇಡಿ ಅವರು
ದಾಖಲೆಗಳನ್ನು ನ್ಯಾಯಾಲಯದ ಮುಂದೆ ಮಂಡಿಸಬೇಕೆಂದು ಆದೇಶಿಸಿದ್ದಾರೆ.
ನಕಲಿ ಛಾಪಾ ಕಾಗದ
ಹಗರಣದಲ್ಲಿ ಭಾಗಿಯಾಗಿದ್ದರೆನ್ನಲಾದ ಕರ್ನಾಟಕದ ಹಾಗೂ ಮಹಾರಾಷ್ಟ್ರದ ಹಲವು
ರಾಜಕಾರಣಿಗಳ ಸಂಭಾಷಣೆಗಳು ಮಂಗಳವಾರ ಬಹಿರಂಗಗೊಳ್ಳಲಿರುವ ಸಿಡಿಗಳಲ್ಲಿ ಇವೆ
ಎನ್ನಲಾಗಿದ್ದು, ಅಂಥ ರಾಜಕಾರಣಿಗಳ ರಾಜಕೀಯ ಭವಿಷ್ಯ ಮಂಗಳವಾರ ನಿರ್ಧಾರವಾಗಲಿದೆ.