Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಲೈಂಗಿಕ ಕಿರುಕುಳ: ಶಬರಿಮಲೆ ತಂತ್ರಿ ಔಟ್

ಜಯಮಾಲ ಪ್ರಕರಣದ ನಂತರ ಈಗ ಹೊಸ ಅಧ್ಯಾಯ

 

ಕೊಚ್ಚಿ: ನಟಿ ಜಯಮಾಲ ಅಯ್ಯಪ್ಪ ಸ್ವಾಮಿಯ ಪಾದಸ್ಪರ್ಶ ವಿವಾದ ನಿಧಾನವಾಗಿ ಕಾವು ಕಳೆದುಕೊಳ್ಳುತ್ತಿರುವಂತೆಯೇ, ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ದೇಗುಲದ ಪ್ರಧಾನ ಅರ್ಚಕರಾದ ಕಂಡರಾರು ಮೋಹನಾರು ಅವರನ್ನು ಸೋಮವಾರ ಸೇವೆಯಿಂದ ವಜಾಗೊಳಿಸಿರುವುದರೊಂದಿಗೆ ಶಬರಿಮಲೆ ವಿವಾದ ಇನ್ನೊಂದು ತಿರುವು ಪಡೆದಿದೆ.

 

ತಮ್ಮನ್ನು ಬಲಾತ್ಕಾರವಾಗಿ ನಗ್ನ ಮಹಿಳೆಯ ಜೊತೆಯಲ್ಲಿ ನಿಂತು ಫೋಟೊ ತೆಗೆಸಲಾಗಿದೆ ಎಂದು ಮೋಹನಾರು ತಂತ್ರಿ ಭಾನುವಾರ ಪೊಲೀಸರಿಗೆ ನೀಡಿರುವ ದೂರು ಸುಳ್ಳು ಎಂಬುದು ಸಾಬೀತಾಯಿತಲ್ಲದೇ, ಅವರು ಅಕ್ರಮ ಲೈಂಗಿಕ ಸಂಬಂಧ ಹೊಂದಿರುವುದೂ ಸಾಬೀತಾಗಿದೆ.

 

ಅಕ್ರಮ ಸಂಬಂಧದಲ್ಲಿ ತೊಡಗಿರುವವರು ಅರ್ಚಕರಾಗಿ ಮುಂದುವರೆಯುವಂತಿಲ್ಲ. ಹಾಗಾಗಿ ಅವರನ್ನು ವಜಾಗೊಳಿಸಿದ್ದೇವೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com