ಮುಂದಿನ ವರ್ಷದಿಂದ
ಮೀಸಲಾತಿ: ಮೊಯಿಲಿ
ಮೊಯಿಲಿ ನೇತೃತ್ವದ
ಸಮಿತಿಯ ಮಧ್ಯಂತರ ವರದಿ
ನವದೆಹಲಿ:
ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಕುರಿತು
ವರದಿಯೊಂದನ್ನು ಸಿದ್ಧಪಡಿಸಿರುವ ವೀರಪ್ಪ ಮೊಯಿಲಿ ನೇತೃತ್ವದ ಮೇಲುಸ್ತುವಾರಿ ಸಮಿತಿ
ತನ್ನ ಮಧ್ಯಂತರ ವರದಿಗೆ ಅನುಮೋದನೆ ನೀಡಿದೆ. ಹಲವು ದಿನಗಳಿಂದ ಉದ್ಭವಿಸಿದ್ದ ಮೀಸಲಾತಿ
ಕುರಿತ ಅನಿಶ್ಚಿತತೆ ಇದರೊಂದಿಗೆ ಕೊನೆಗೊಂಡಿದೆ.
ಸೋಮವಾರ ವರದಿಯನ್ನು
ಸಂಪೂರ್ಣವಾಗಿ ಪರಾಮರ್ಶಿಸಿದ ಮೇಲುಸ್ತುವಾರಿ ಸಮಿತಿ ಅಲ್ಪಸ್ವಲ್ಪ ಬದಲಾವಣೆ ಮಾಡಿ ಮಧ್ಯಂತರ
ವರದಿಗೆ ಅನುಮೋದನೆ ನೀಡಿತು ಎಂದು ಸಮಿತಿ ಮುಖ್ಯಸ್ಥ ವೀರಪ್ಪ ಮೊಯಿಲಿ ಹೇಳಿದರು.
ಮೀಸಲು ಅನುಷ್ಠಾನಗೊಳ್ಳುವ
ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ `ಸಬಲೀಕರಣ ಸಮಿತಿ' ರಚಿಸಬೇಕು ಎಂದು ವರದಿ ಸಲಹೆ ನೀಡಿದೆ.
ಅಲ್ಲದೇ ಮುಂದಿನ ಶೈಕ್ಷಣಿಕ ವರ್ಷದಲ್ಲೇ ಮೀಸಲು ಅನುಷ್ಠಾನ ಸಾಧ್ಯ ಎಂದು ಸಮಿತಿ
ಅಭಿಪ್ರಾಯ ಪಟ್ಟಿದೆ.