ಹಾಲು ಉತ್ಪಾದನೆಯಲ್ಲಿ ಭಾರತ ಮುಂದೆ
ಚಿಕ್ಕಮಗಳೂರು :
ಜಗತ್ತಿನಲ್ಲಿಯೇ ಅತೀ ಹೆಚ್ಚು ಹಾಲು ಉತ್ಪಾದಿಸುವ ದೇಶ ಭಾರತ ಎಂದು ಪಶುಸಂಗೋಪನಾ
ವಿಭಾಗದ ಉಪನಿರ್ದೇಶಕ ಡಾ. ಆರ್. ರಾಮಚಂದ್ರ ಹೇಳಿದ್ದಾರೆ.
ಅವರು ನಗರದಲ್ಲಿ
ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡುತ್ತಿದ್ದರು. ಹಾಲು ಉತ್ಪಾದನೆಯಲ್ಲಿ
ಹೆಚ್ಚಿನ ಲಾಭ ಗಳಿಸುವ ಬಗ್ಗೆ ಹೈನುದಾರರು ಚಿಂತನೆ ನಡೆಸಬೇಕು. ಅದಕ್ಕಾಗಿ
ಕೃತಕ ಗರ್ಭಧಾರಣೆಯನ್ನು ಅನುಸರಿಸಬೇಕಾಗುತ್ತದೆ. ಅದರಿಂದ ವಿವಿಧ ತಳಿಗಳ
ಹಸುಗಳನ್ನು ಬೆಳೆಸುವುದು ಸಾಧ್ಯವಾಗುತ್ತದೆ ಎಂದು ರಾಮಚಂದ್ರ ಅವರು ಹೈನುದಾರರಿಗೆ
ಸಲಹೆ ಮಾಡಿದರು.
ಇದೇ ಸಂದರ್ಭದಲ್ಲಿ
ಮಾತನಾಡಿದ ಹಾಲು ಉತ್ಪಾದಕ ಸಂಘದ ಉಪನಿರ್ವಹಣಾಧಿಕಾರಿ ಡಾ. ರವಿಶಂಕರ್ ಹೆಗಡೆ ಹಾಲು
ಉತ್ಪಾದನೆಯಲ್ಲಿ ದೇಶ ಮುಂದಿದ್ದರೂ ಈ ಕ್ಷೇತ್ರದಲ್ಲಿ ಸಾಧಿಸಬೇಕಾದ್ದು ಇನ್ನೂ ಬಹಳ
ಇದೆ ಎಂದರು.