|
ಕನ್ನಡಿಗರಿಗೆಷ್ಟು
ಕೆಲ್ಸ ಸಿಕ್ಕಿದೆ...ಸಿದ್ಧಲಿಂಗಯ್ಯ ವಿಚಾರ
`ಸೂಕ್ತ ಕ್ರಮ
ಕೈಗೊಳ್ಳದೆ ಇರುವ ಸಂಸ್ಥೆಗಳ ಮೇಲೆ ಕ್ರಮ
ಬೆಂಗಳೂರು :
ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಸ್ವಾಮ್ಯದ ಉದ್ದಿಮೆಗಳು ಮತ್ತು ಮಾಹಿತಿ
ತಂತ್ರಜ್ಞಾನ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ನೀಡಲಾಗಿರುವ ಉದ್ಯೋಗ ಪ್ರಮಾಣದ ಬಗ್ಗೆ
ವಿವರ ಸಂಗ್ರಹಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ.
ಬೆಂಗಳೂರು ನಗರ
ಹಾಗೂ ಗ್ರಾಮಾಂತರ ಜಿಲ್ಲೆಗಳ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಮಾಲೋಚನೆ
ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ||ಸಿದ್ಧಲಿಂಗಯ್ಯ
ಈ ವಿಷಯ ತಿಳಿಸಿದರು.
ಕಳೆದ ಐದು
ವರ್ಷಗಳಲ್ಲಿ ಕನ್ನಡಿಗರಿಗೆ ನೀಡಿರುವ ಉದ್ಯೋಗ ಪ್ರಮಾಣದ ಬಗ್ಗೆ ವಿವರ ಕೇಳಿ ಕೇಂದ್ರ
ಹಾಗೂ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ಸಧ್ಯದಲ್ಲೇ ಪತ್ರ ಬರೆಯಲಾಗುವುದು
ಎಂದರು.
`ಸೂಕ್ತ ಪ್ರಮಾಣದಲ್ಲಿ
ಸ್ಥಳೀಯರನ್ನು ಭರ್ತಿ ಮಾಡಿರದ ಸಂಸ್ಥೆಗಳ ಮೇಲೆ ಪ್ರಾಧಿಕಾರ ಸೂಕ್ತ ಕ್ರಮ
ಕೈಗೊಳ್ಳಲಿದೆ' ಎಂದು ಅವರು ತೀಕ್ಷ್ಣವಾಗಿ ತಿಳಿಸಿದರು.
ರಾಜ್ಯದ ಉರ್ದು
ಶಾಲೆಗಳಲ್ಲಿ ಖಾಲಿ ಇರುವ ೧೪೦ಕ್ಕೂ ಮಿಗಿಲಾಗಿ ಕನ್ನಡ ಶಿಕ್ಷಕರ ಹುದ್ದೆಗಳನ್ನು ಸಧ್ಯದಲ್ಲೇ
ಭರ್ತಿ ಮಾಡಲು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಒಪ್ಪಿದ್ದಾರೆ. ಹಾಗೆಯೇ ವೃತ್ತಿ
ಶಿಕ್ಷಣ ಪ್ರವೇಶ ಕನ್ನಡದಲ್ಲಿ ನಡೆಸಲು ಉನ್ನತ ಶಿಕ್ಷಣ ಸಚಿವರು ಸಮ್ಮತಿಸಿದ್ದಾರೆ
ಎಂದು ಹೇಳಿದರು.
|