ಬಿಜಾಪುರ: ಮಾಜಿ ಸಂಸದ ಗುರಡ್ಡಿ ಇನ್ನಿಲ್ಲ
ಬಿಜಾಪುರ : ಮಾಜಿ ಸಂಸದ
ಶಿವಕುಮಾರಪ್ಪ ಮಲ್ಲಪ್ಪ ಗುರಡ್ಡಿಯವರು ಭಾನುವಾರ ಬೆಳಗ್ಗೆ ವಿಧಿವಶರಾಗಿದ್ದಾರೆ.
ಗುರಡ್ಡಿಯವರು ಮುದ್ದೇ ಬಿಹಾಳದಿಂದ ಎರಡು ಬಾರಿ ಎಂಎಲ್‌ಎ ಆಗಿ ಹಾಗೂ ಒಂದು ಬಾರಿ ಸಂಸದರಾಗಿ
ಆಯ್ಕೆಯಾಗಿದ್ದರು.
ಗುರಡ್ಡಿ ಅವರು
ಜನತಾದಳ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಕಳೆದ ಒಂದು
ವಾರದಿಂದ ಗುರಡ್ಡಿ ಅವರ ಆರೋಗ್ಯ ಹದಗೆಟ್ಟಿದ್ದು, ಭಾನುವಾರ ಅವರು ಇಹ ಲೋಕ
ತ್ಯಜಿಸಿದರು.