|
ಸೆಲ್ ಫೋನ್‌ನಿಂದ
ರೋಗ
ಮಂಗಳೂರಿನ
ಕೆಎಂಸಿ ಆಸ್ಪತ್ರೆಯಲ್ಲಿ ಬಹಿರಂಗ
ಮಂಗಳೂರು:
ಅಸ್ಪತ್ರೆಯಲ್ಲಿ ವೈದ್ಯರು ಬಳಸುವ ಸೆಲ್ ಫೋನ್ ನಿಂದ ಬ್ಯಾಕ್ಟೀರಿಯಾ ಸೊಂಕು ಹರಡುತ್ತಿದೆ
ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಇಲ್ಲಿನ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನಲ್ಲಿ ನಡೆಸಲಾದ
ಸಂಶೋಧನೆಯ ಪ್ರಕಾರ ಶೇ. ೨೫ ರಷ್ಟು ವೈದ್ಯರು ಬಳಸುವ ಸೆಲ್ ಫೋನ್‌ನಿಂದ
ಸ್ಟಪಿಲೊಕೊಕಸ್
ಅರಿಯಸ್
ಎಂಬ ಬ್ಯಾಕ್ಟೀರಿಯಾ ಹರಡುತ್ತಿದೆ. ಕೆಲ ಸೆಲ್ ಫೋನ್‌ಗಳು ರೋಗ ನಿರೋಧಕ
ಬ್ಯಾಕ್ಟಿರೀಯಗಳನ್ನು ಒಳಗೊಂಡಿತ್ತು ಎಂದು ಸಂಶೋಧಕರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ
ವೈದ್ಯರು ಮೊಬೈಲ್ ಫೋನ್‌ನ ಬಳಕೆ ಮಾಡುವುದು ಹೆಚ್ಚಾಗಿದೆ. `ಜನಜಂಗುಳಿನಿಂದ
ಕೂಡಿದ ಆಸ್ಪತ್ರೆ ಯಲ್ಲಿ ಸೆಲ್ ಫೋನ್, ಪಿಡಿಎ ಗಣಕಗಳು, ನಿಸ್ತಂತು(ವಯರ್‌ಲೆಸ್)
ಗಣಕಗಳು ಮಾಹಿತಿಯೊಂದನ್ನೆ ರವಾನಿಸುವುದಿಲ್ಲ.ಆರೋಗ್ಯ ಸುಧಾರಣ ಯಂತ್ರಗಳು
ಸೊಂಕನ್ನು ಹರಡುವ ಸಾಧ್ಯತೆಯಿದೆ
ಎಂದು ಸಂಶೋಧಕರು ಹೇಳಿದ್ದಾರೆ.
ಭಾರತದಲ್ಲಿ ಈ ಬಗ್ಗೆ
ಹೆಚ್ಚಿನ ಮಾಹಿತಿ ತಿಳಿದಿಲ್ಲ ಸ್ಪೇನ್, ಇಸ್ರೇಲ್ ಹಾಗೂ ಇಂಗ್ಲೆಂಡ್‌ನಲ್ಲಿ ಈಗಾಗಲೇ ಈ ಬಗ್ಗೆ
ಅಧ್ಯಯನ ಶುರುವಾಗಿದ್ದು ೨೦೦೪ ನಲ್ಲಿ ನಡೆಸಿದ ಸಂಶೋಧನೆಯಲ್ಲಿ ೩೦
ಮಾದರಿಗಳಲ್ಲಿ ಸೆಲ್ ಫೋನ್‌ಗಳು ಕೆಲವು ಕ್ರಿಮಿಗಳನ್ನು ಹೊಂದಿರುವುದು ಕಂಡು
ಬಂದಿದೆ ಮೆಥಿಸಿಲಿನ್ ಎಂಬ ಆಂಟಿ ಬಯೋಟಿಕ್‌ಗೆ ನಿರೋಧಕವಾಗಿ ಕ್ರಿಮಿಗಳು ವರ್ತಿಸುತ್ತದೆ.
ಎಡಿನ್‌ಬರ್ಗ್‌ನ ವೆಸ್ಟರ್ನ್
ಜೆನರಲ್ ಆಸ್ಪತ್ರೆಯ ಸಂಶೋಧಕ ಮಂಗಳೂರಿನಲ್ಲಿ ಪತ್ತೆಯಾಗಿರುವ ಮೊಬೈಲ್ ಸೋಂಕಿನ
ಸಂಶೊಧನೆಯನ್ನು ಪುಷ್ಟಿಕರಿಸುತ್ತಾ
ಬ್ಯಾಕ್ಟೀರಿಯಾ ಸರ್ಜಿಕಲ್ ಗಾಯ ಮತ್ತು ಈ ಕ್ರಿಮಿಗಳು ಸೋಂಕು
ಹರಡುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಇದು ಮುಂದೆ ಆಹಾರ
ವಿಷಯುಕ್ತಗೊಳಿಸುವುದರ ಜೊತೆಗೆ ವಿಷದ ಪರಿಣಾಮದಿಂದ ಉಂಟಾಗುವ
ಆಘಾತಕ್ಕೂ(ಟಾಕ್ಸಿಕ್ ಶಾಕ್ ಫೋಬಿಯಾ) ಕಾರಣವಾಗಬಲ್ಲದು ಎಂದಿದ್ದಾರೆ.
ಸ್ಟಪಿಲೊಕೊಕಸ್
ಅರಿಯಸ್ ಬ್ಯಾಕ್ಟೀರಿಯಾದಿಂದ ಚರ್ಮರೋಗ, ನ್ಯೂಮೋನಿಯಾ, ಮೆಂನಿಂಜೈಂಟಿಸ್,
ಓಸ್ಟಿಯೋಮೆಲೈಟಿಸ್, ಎಂಡೊಕಾರ್ಡೈಟಿಸ್ ಹಾಗೂ ಮೂತ್ರ ಸಂಬಂಧಿ ಸೊಂಕು ಹರಡುತ್ತದೆ
ಎಂದು ವೈದ್ಯಕೀಯ ಸಂಶೋಧಕರು ಹೇಳಿದ್ದಾರೆ. |