Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಉತ್ತರಕನ್ನಡದಲ್ಲಿ ೨೫ ಬಿಎಸ್‌ಎನ್‌ಎಲ್ ಟವರ್

ಕಾರವಾರ: ಕಳೆದ ಆರ್ಥಿಕ ವರ್ಷದಲ್ಲಿ ಭಾರತ ಸಂಚಾರ ನಿಗi ನಿಯಮಿತ ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ೬೧ ಕೋಟಿ ಲಾಭ ಪಡೆದಿದ್ದು, ಹೆಚ್ಚುವರಿ ೨೫ ಮೊಬೈಲ್ ಟವರ್‌ಗಳನ್ನು ಅಳವಡಿಸಲಾಗುವುದು ಎಂದು ಬಿಎಸ್‌ಎನ್‌ಎಲ್ ಮುಖ್ಯ ನಿರ್ದೇಶಕ ಕೆ.ಜೆ. ಜೈ ಕುಮಾರ್ ಹೇಳಿದ್ದಾರೆ.

 

ಅವರು ಟೆಲಿಕಾಂ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡುತ್ತಾ ಸ್ಥಿರ ದೂರವಾಣಿ(ಲ್ಯಾಂಡ್‌ಲೈನ್) ಸಂಪರ್ಕದಿಂದ ೫೪.೪ ಕೋಟಿ ಹಾಗೂ ಮೊಬೈಲ್ ಸಂಪರ್ಕದಿಂದ ೭.೧ ಕೋಟಿ ಲಾಭ ಬಂದಿದೆ. ಜಿಲ್ಲೆಯಲ್ಲಿ ಈಗಾಗಲೇ ೪೧ ಮೊಬೈಲ್ ಟವರ್‌ಗಳಿವೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಸಂಸದ ಅನಂತಕುಮಾರ್ ಹೆಗಡೆ ವಹಿಸಿದ್ದರು.

 

ಈ ವರ್ಷಾಂತ್ಯಕ್ಕೆ ಇನ್ನೂ ೩೫ ಗೋಪುರಗಳನ್ನು ಮೊಬೈಲ್ ಸಂಪರ್ಕಕ್ಕಾಗಿ ನಿರ್ಮಿಸಲಾಗುವುದು. ಅಲ್ಲದೆ ಪ್ರವಾಸಿ ತಾಣಗಳ ಸಮಸ್ಯೆಯನ್ನು ಬೇಗನೆ ನಿವಾರಿಸಲಾಗುವುದು ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com