ಜುಲೈ ೨೮ರಂದು ಆಖಿಲ ಭಾರತೀಯ ಬ್ಯಾಂಕ್ ಮುಷ್ಕರ
ಬೆಂಗಳೂರು :
ಜುಲೈ ೨೮ರಂದು ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ದು ಎಲ್ಲಾ ಬ್ಯಾಂಕ್‌ಗಳನ್ನು
ಅಂದು ಮುಚ್ಚಲಾಗುವುದು ಎಂದು ಅಖಿಲ ಭಾರತೀಯ ಬ್ಯಾಂಕ್ ನೌಕರರ ಸಂಘದ ಪ್ರಕಟಣೆ
ತಿಳಿಸಿದೆ.
ಸಹಜ ಬ್ಯಾಂಕ್
ಸೇವೆಗಳನ್ನು ಖಾಸಗಿಯವರಿಗೆ ಹೊರಗುತ್ತಿಗೆ ನೀಡುವ ಕ್ರಮವನ್ನು ಪ್ರತಿಭಟಿಸಿ ಬ್ಯಾಂಕ್
ನೌಕರರು ಮುಷ್ಕರ ನಡೆಸಲಿದ್ದಾರೆ. ಬ್ಯಾಂಕ್ ಅಕೌಂಟ್ ತೆರೆಯುವುದು, ಹಣ ಪಡೆಯುವುದು
ಮತ್ತು ಪಾವತಿಸುವುದು, ಡ್ರಾಫ್ಟ್ ತೆಗೆದುಕೊಳ್ಳುವುದು, ಲೋನ್ ನೀಡುವುದು ಮತ್ತಿತರ
ಕೆಲವು ಪ್ರಕ್ರಿಯೆಗಳನ್ನು ಖಾಸಗಿಯವರಿಗೆ ನೀಡುವ ಕುರಿತು ಇತ್ತೀಚೆಗೆ ರಿಸರ್ವ್ ಬ್ಯಾಂಕ್
ಸುತ್ತೋಲೆಯೊಂದನ್ನು ಹೊರಡಿಸಿತ್ತು.