|
ಯು.ಆರ್.ರಾವ್‌ಗೆ ಸಾಗರ್ ಪ್ರಶಸ್ತಿ
ಬೆಂಗಳೂರು:
ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆಗೆ ಹೆಚ್ಚಿನ
ಗಮನಹರಿಸಬೇಕು ಎಂದು ಖಗೋಳ ಶಾಸ್ತ್ರಜ್ಞ ಯು.ಆರ್.ರಾವ್ ಅಭಿಪ್ರಾಯಪಟ್ಟರು.
ನಗರದ ಪುರಭವನ
ಭಾನುವಾರ ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮದಲ್ಲಿ ದಿ. ದಯಾನಂದ್ ಸಾಗರ್ ಅವರ
ಹೆಸರಿನಲ್ಲಿ ನೀಡಲಾಗುವ ಸಾಗರ
ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಇದೇ ಮೊದಲ ಬಾರಿಗೆ
ದೇಶದಲ್ಲಿ ಆಹಾರ ಸಮಸ್ಯೆ ಎದುರಿಸುತ್ತಿರಿವ ಹಿನ್ನಲೆಯಲ್ಲಿ ೫ ಮಿಲಿಯನ್ ಟನ್ ಗೋಧಿಯನ್ನು
ಆಮದು ಮಾಡಿಕೊಂಡಿದೆ. ಕಳೆದ ೧೦ ವರ್ಷಗಳಿಂದ ದೇಶದಲ್ಲಿ ಆಹಾರ ಉತ್ಪಾದನೆಯಲ್ಲಿ
ಏರಿಕೆಯಾಗಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಇನ್ನು ೧೦-೨೦ ವರ್ಷಗಳಲ್ಲಿ ದೇಶ
ತೀವ್ರ ಬರಗಾಲ ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ
ಶಿಕ್ಷಣ ತಜ್ಞ ಕೆ.ಆರ್.ಪರಮಹಂಸ, ಕವಿ ಡಾ.ಹೆಚ್.ಎಸ್.ವೆಂಕಟೇಶ ಮೂರ್ತಿ, ಸಂಗೀತ ವಿದ್ವಾನ್
ಆರ್.ಕೆ.ಪದ್ಮನಾಭ್, ಪ್ರೊ.ಕೆ.ಎಸ್.ನಾರಾಯಣಾಚಾರ್, ಶಸ್ತ್ರ ಚಿಕಿತ್ಸಕ ಡಾ.ಬಾಬೂಬಜಂತ್ರಿ,
ನಟಿ ತಾರಾ ಅವರನ್ನೂ ಸಾಗರ
ಪ್ರಶಸ್ತಿ ನೀಡಿ ಗೌರವಿಸಲಾಯಿತು. |