ಸುದ್ಧ, ನಾಯಿ ನೆರಳು ಚಿತ್ರಗಳಿಗೆ ಓಯಸಿನ್ ಪ್ರಶಸ್ತಿ
ದೆಹಲಿ :
ಓಸಿಯಾನ್ ಚಿತ್ರೋತ್ಸವದಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ `ನಾಯಿ ನೆರಳು' ಚಿತ್ರ
ಅತ್ಯುತ್ತಮ ಜೂರಿ ಪ್ರಶಸ್ತಿ ಹಾಗೂ ಪಿ.ಎಸ್.ರಾಮಚಂದ್ರ ನಿರ್ದೇಶನದ `ಸುದ್ಧ' ತುಳು
ಚಿತ್ರ ಅತ್ಯುತ್ತಮ ಭಾರತೀಯ ಭಾಷಾ ಚಿತ್ರ ಪಶಸ್ತಿ ಗಿಟ್ಟಿಸಿಕೊಂಡಿವೆ.
ಓಸಿಯಾನ್
ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದುಕೊಂಡಿರುವ ಚಿತ್ರಗಳಿಗೆ ವಿದೇಶಿ ಟಿ.ವಿ ಚಾನೆಲ್‌ಗಳಲ್ಲಿ
ಅಪಾರ ಬೇಡಿಕೆ ಇದೆ. ಕನ್ನಡ ಚಿತ್ರವೊಂದಕ್ಕೆ ಈ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ
ಎಂದು ಗಿರೀಶ್ ಕಾಸರವಳ್ಳಿ ಸಂತಸ ವ್ಯಕ್ತಪಡಿಸಿದ್ದಾರೆ.
ತುಳು ಚಿತ್ರ `ಸುದ್ಧ'ವನ್ನು
ಪಿ.ಎಸ್.ರಾಮಚಂದ್ರ ನಿರ್ದೇಶಿಸಿದ್ದು, ಸುಭಾಷ್ ಪಡಿವಾಳ, ಸುಜಾತ ಮುದ್ರಾಡಿ, ಮೋಹನ್
ದಾಸ್, ಶಾರದಾದೇವಿ ಮುಖ್ಯ ಪಾತ್ರದಲ್ಲಿದ್ದಾರೆ.