ಲಾಸ್ ಏಂಜಲೀಸ್:
ಪೊರ್ಟರಿಕೋ ದೇಶದ ಸುಂದರಿ ಝಲೇಕಾ ರಿವೇರಾ ವಿಶ್ವಸುಂದರಿ ಪಟ್ಟ ಗೆದ್ದಿದ್ದಾರೆ. ೮೦
ದೇಶಗಳ ಸುಂದರಿಯರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಇದರ ಅಂತಿಮ ಸುತ್ತಿನಲ್ಲಿ
೧೮ ವರ್ಷದ ಝಲೆಕಾ ತನ್ನ ಪ್ರತಿಭೆಯಿಂದ ಎಲ್ಲರನ್ನೂ ಹಿಂದಕ್ಕೆ ತಳ್ಳಿ ಗೆಲುವು
ಸಾಧಿಸಿದರು. ಮಿಸ್ ಜಪಾನ್ ಮೊದಲ ರನ್ನರ್‌ಅಪ್ ಆದರು. ದೆಹಲಿ ನಿವಾಸಿ ಭಾರತದ ನೇಹಾ
ಕಪೂರ್ ಸ್ಪರ್ಧೆಯಲ್ಲಿ ಅಂತಿಮ ಹಂತ ತಲುಪದೆ ನಿರಾಶೆ ಮೂಡಿಸಿದರು.