ಲೋಕಾಯುಕ್ತ ಸರ್ವಶಕ್ತನಲ್ಲ: ಕೇರಳ ನ್ಯಾಯಮೂರ್ತಿ
ಬೆಂಗಳೂರು :
ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಗ್ರಹಿಸಲು ಕೇವಲ ಒಬ್ಬ ಲೋಕಾಯುಕ್ತರಿಂದಲೇ
ಸಾಧ್ಯವಿಲ್ಲ ಎಂದು ಕೇರಳ ಉಚ್ಛನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ||ವಿ.ಎಸ್.ಮುಳಿಮಠ
ಅವರು ಅಭಿಪ್ರಾಯ ಪಟ್ಟಿದ್ದಾರೆ.
ನಗರದ
ಕಾಲೇಜೊಂದರಲ್ಲಿ ಹಿರಿಯ ಪತ್ರಕರ್ತ ಪಿ.ರಾಜೇಂದ್ರ ಅವರ `ಭಲೇ ಲೋಕಾಯುಕ್ತ'
ಹಾಗೂ `ವಾಹ್ ಲೋಕಾಯುಕ್ತ' ಆಂಗ್ಲ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಪ್ರತಿ ನಾಗರೀಕರಲ್ಲೂ
ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಬೇಕು, ಲೋಕಾಯುಕ್ತರಾಗಿ ನ್ಯಾಯಮೂರ್ತಿ ವೆಂಕಟಾಚಲ
ಅವರ ಕಾರ್ಯ ಶ್ಲಾಘನೀಯವಾದುದು ಎಂದು ಅವರು ತಿಳಿಸಿದರು.
ಲೋಕಾಯುಕ್ತರಾಗಿ
ನ್ಯಾಯಮೂರ್ತಿ ವೆಂಕಟಾಚಲ ತೊಲಗಿಸಿರುವ ಭ್ರಷ್ಟಾಚಾರದ ಪ್ರಮಾಣ ತುಂಬಾ ಕಡಿಮೆ
ಆದರೆ, ಅವರು ಮಾಡಿದ ಪ್ರಯತ್ನಕ್ಕೆ ಯಾವಾಗಲೂ ಬೆಲೆ ಇರುತ್ತದೆ ಎಂದು
ತಿಳಿಸಿದರು.
ಇದೇ ಸಂದರ್ಭದಲ್ಲಿ
ಮಾತನಾಡಿದ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಅವರು ನ್ಯಾಯಮೂರ್ತಿ
ವೆಂಕಟಾಚಲ ಅವರಿಗೆ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಗ್ರಹಿಸಲು ಸಾಧ್ಯವಾಗದೇಹೋದರೂ,
ಅವರ ಮೂಲಕ ಭ್ರಷ್ಟಾಚಾರದ ಆಳ, ಅಗಲ ಹಾಗೂ ವಿಸ್ತಾರಗಳನ್ನು ಜನರು ನೋಡುವಂತಾಯಿತು
ಎಂದರು.