ಜಸ್ವಂತ್ ಸಿಂಗ್‌ಗೆ ಪ್ರಧಾನಿ ಸವಾಲು
ಹೊಸದಿಲ್ಲಿ :
ಪಿ.ವಿ.ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಪ್ರಧಾನಿ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ
ವ್ಯಕ್ತಿಯೊಬ್ಬರು ಅಮೇರಿಕ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದರು ಮತ್ತು ಭಾರತದ
ಪರಮಾಣು ಕಾರ್ಯಕ್ರಮಗಳ ರಹಸ್ಯ ಮಾಹಿತಿಗಳನ್ನು ಅಮೇರಿಕಕ್ಕೆ ನೀಡುತ್ತಿದ್ದರು
ಎಂದು ಆರೋಪಿಸಿರುವ ಬಿಜೆಪಿ ನಾಯಕ ಜಸ್ವಂತ್ ಸಿಂಗ್ ವ್ಯಕ್ತಿಯ ಹೆಸರು ಬಹಿರಂಗ ಪಡಿಸುವಂತೆ
ಪ್ರಧಾನಿ ಸವಾಲು ಹಾಕಿದ್ದಾರೆ.
ಸರ್ಕಾರದ ವಿರುದ್ಧ
ಟೀಕೆ ಮಾಡಲು ಬಿಜೆಪಿ ಬಳಿ ಈಗ ಯಾವುದೇ ವಿಷಯಗಳಿಲ್ಲ ಅದಕ್ಕಾಗಿಯೇ ಇಂಥ ಆರೋಪಕ್ಕಿಳಿದಿದೆ
ಎಂದಿರುವ ಪ್ರಧಾನಿ, ಜಸ್ವಂತ್ ಸಿಂಗ್‌ರಿಗೆ ಧೈರ್ಯ ಮತ್ತು ಸೌಜನ್ಯ ಎಂಬುದಿದ್ದರೆ
ಅಮೇರಿಕದ ಪರ ಬೇಹುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯ ಹೆಸರು ಬಹಿರಂಗ ಪಡಿಸಲಿ
ಎಂದು ಸವಾಲೆಸೆದಿದ್ದಾರೆ.