ಕಲಾಪ ಬಹಿಷ್ಕರಿಸಬೇಡಿ ನ್ಯಾಯಮೂರ್ತಿ
ಕರೆ
ಗುಲ್ಬರ್ಗಾ :
ಕಾರಣಗಳಿಲ್ಲದೇ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸುವುದನ್ನು ಬಿಟ್ಟು
ನ್ಯಾಯಾಲಯಗಳಿಗೆ ಹಾಜರಾಗಬೇಕೆಂದು ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್
ಅವರು ವಕೀಲರಿಗೆ ಆದೇಶ ನೀಡಿದ್ದಾರೆ.
ಜಿಲ್ಲಾ ವಕೀಲರ ಸಂಘ
ಏರ್ಪಡಿಸಿದ್ದ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಜೋಸೆಫ್
ಗುಲ್ಬರ್ಗ ಹಾಗೂ ಧಾರವಾಡಗಳಲ್ಲಿ ಉಚ್ಛನ್ಯಾಯಾಲಯದ ಪೀಠಗಳನ್ನು ಸ್ಥಾಪಿಸಬೇಕು
ಎಂದು ತೀರ್ಮಾನ ತೆಗೆದುಕೊಂಡಾಗಿದೆ ಆದರೆ ಈ ಪೀಠಗಳಿಗೆ ಆಗಬೇಕಾಗಿರುವ ಕೆಲಸಗಳ
ಬಗ್ಗೆ ತಮ್ಮ ಜೊತೆ ಧಾರವಾಡದ ವಕೀಲರಾಗಲಿ ಅಥವಾ ಗುಲ್ಬರ್ಗದ ವಕೀಲರಾಗಲೀ
ಚರ್ಚಿಸಿಲ್ಲ ಎಂದು ಖಾರವಾಗಿ ಟೀಕಿಸಿದ್ದಾರೆ.
ನ್ಯಾಯಾಲಯಗಳನ್ನು
ಬಹಿಷ್ಕರಿಸುವುದು ಹಾಗೂ ಹೋರಾಟ ಮಾಡುವುದಾಗಲಿ ಕಾನೂನುಬಾಹಿರ ಎಂದು ಸವೋಚ್ಛ
ನ್ಯಾಯಾಲಯವೇ ಹೇಳಿರುವಾಗ ಧಾರವಾಡದ ವಕೀಲರು ನ್ಯಾಯಾಲಯ ಕಲಾಪವನ್ನು
ಬಹಿಷ್ಕರಿಸುವುದು ಸೂಕ್ತವಲ್ಲ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ
ಸಂಚಾರಿ ಪೀಠಕ್ಕಾಗಿ ಅಫ್ಜಲ್‌ಪುರ ರಸ್ತೆಬಳಿ ಇರುವ ೫೦ ಎಕರೆ ಸ್ಥಳವನ್ನು ಮುಖ್ಯನ್ಯಾಯಾಧೀಶ
ಸಿರಿಯಾಕ್ ಜೋಸೆಫ್ ವೀಕ್ಷಿಸಿದರು.