ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ
ಬೆಂಗಳೂರು :
ಭಾರತೀಯ ಜನತಾ ಪಕ್ಷದ ಶಾಸಕ ಜನಾರ್ಧನ ರೆಡ್ಡಿ ಮಾಡಿದ ಗಣಿ ಲಂಚ ಆರೋಪದಿಂದ
ಕಳೆದ ೧೫ ದಿನಗಳಿಂದ ತತ್ತರಿಸಿದ್ದ ರಾಜ್ಯ ಸರ್ಕಾರವೇ ಖುದ್ದು ರೆಡ್ಡಿಯ ವಿರುದ್ಧ ಮಾನನಷ್ಟ
ಮೊಕದ್ದಮೆ ಹೂಡಲು ನಿರ್ಧರಿಸಿದೆ.
ಸರ್ಕಾರದ ಪರವಾಗಿ
ರೆಡ್ಡಿ ವಿರುದ್ಧ ಸೆಷನ್ಸ್ ನ್ಯಾಯಾಲಯದಲ್ಲಿ ಭಾರತೀಯ ದಂಡ ಸಂಹಿತೆ ೧೯೯/೨ ಅನ್ವಯ
ಮಾನನಷ್ಟ ಮೊಕದ್ದಮೆ ಒಂದೆರಡು ದಿನಗಳಲ್ಲಿ ಹೂಡಲಿದೆ.
ಈ ಕುರಿತು ಈಗಾಗಲೇ
ರಾಜ್ಯ ಗೃಹ ಸಚಿವಾಲಯ ಮಧ್ಯರಾತ್ರಿಯೇ ಆದೇಶ ಹೊರಡಿಸಿದ್ದು, ರಾಜ್ಯ ಸರ್ಕಾರವೇ ಪಬ್ಲಿಕ್
ಪ್ರಾಸಿಕ್ಯೂಟರ್ ಒಬ್ಬರನ್ನು ನೇಮಿಸಲಿದೆ.
ಮುಖ್ಯಮಂತ್ರಿ ಹಾಗೂ
ಇಬ್ಬರೂ ಸಚಿವರ ಪರವಾಗಿ ನ್ಯಾಯಾಲಯದಲ್ಲಿ ರೆಡ್ಡಿ ವಿರುದ್ಧ ಸರ್ಕಾರದ ಪರವಾಗಿ
ಅವರು ದಾವೆ ಹೂಡಲಿದ್ದಾರೆ. ಆಗ ರೆಡ್ಡಿ ಕಾನೂನು ಸವಾಲು ಎದುರಿಸಲೇ ಬೇಕಾಗುತ್ತದೆ ಹಾಗೂ
ತಮ್ಮ ಬಳಿಯಿರುವ ಸಾಕ್ಷ್ಯಾಧಾರಗಳನ್ನು ಒಪ್ಪಿಸಲೇ ಬೇಕಾಗುತ್ತದೆ. ಇದು ರಾಜ್ಯ ಸರ್ಕಾರ
ಪ್ರತಿಪಕ್ಷದ ಧಾಳಿಯಿಂದ ಬಚಾವಾಗಲು ಕಂಡುಕೊಂಡಿರುವ ಹೊಸ ದಾರಿ.