ನಿರ್ಮಲ ಕರ್ನಾಟಕ ಯೋಜನೆ ಸಾಕಾರ
ಚಿಕ್ಕಮಗಳೂರು:
ಕಡೂರು ತಾಲೂಕಿನಲ್ಲಿ ಜನತೆ ನಿರ್ಮಲ ಕರ್ನಾಟಕ ಯೋಜನೆಯ ಆಡಿಯಲ್ಲಿ ತಮ್ಮ
ಗ್ರಾಮವನ್ನು ಚೊಕ್ಕಗೊಳಿಸುವತ್ತ ಹೆಜ್ಜೆ ಹಾಕಿದ್ದಾರೆ.
ಇಲ್ಲಿನ ಚಿಕ್ಕನೆಲ್ಲೂರು
ಗ್ರಾಮದ ೧೫೯ ಮನೆಗಳು ಈಗ ಶೌಚಾಲಯವನ್ನು ಹೊಂದಲಿದೆ.
ಶ್ರಮದಾನದಿಂದ
ಎಲ್ಲವು ಸಾಧ್ಯ ಎನ್ನುವ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಅಂಜಿನಪ್ಪ ಗ್ರಾಮದ ಜನರು
ಶುಚಿತ್ವದ ಮಹತ್ವ ಅರಿತ್ತಿದ್ದಾರೆ. ಅಧಿಕಾರಿಗಳು ಎಲ್ಲರ ಜೊತೆಗೂಡಿ ಕೆಲಸಕ್ಕೆ ಇಳಿದಿರುವುದು
ಜನರಿಗೆ ಹೊಸ ಹುರುಪು ತಂದಿದೆ ಎಂದರು. ಕೊಳಚೆ ಪ್ರದೇಶವಾಗಿದ್ದ ಹಿಂದುಳಿದ ವರ್ಗದ
ಜನರ ಮನೆಯ ಸುತ್ತಮುತ್ತಲಿನ ವಾತವರಣ ಈಗ ಶುಭ್ರತೆಯಿಂದ ಕೂಡಿದೆ ಎಂದು
ಗ್ರಾಮ ಪಂಚಾಯಿತಿ ಸದಸ್ಯೆ ಅಂಬಾ ತಿಮ್ಮಾಳ್ ಹೇಳಿದ್ದಾರೆ.