Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಮೈಸೂರಿಗೆ ಕಲಾಂ ರಾಯಭಾರಿ

ಟಿಪ್ಪುವಿನ ರಾಕೆಟ್ ಪೋರ್ಟ್ ನೋಡಿ ಪ್ರಭಾವಿತರಾದ ರಾಷ್ಟ್ರಪತಿ

 

ಮೈಸೂರು : ಭಾರತದ ಇತಿಹಾಸದಲ್ಲಿಯೇ ಮೊತ್ತಮೊದಲ ಬಾರಿಗೆ ಕ್ಷಿಪಣಿ ತಂತ್ರಜ್ಞಾನ ಪರಿಚಯಿಸಿದ ಖ್ಯಾತಿ ಕೆಲಕಾಲದವರೆಗೆ ಆಳಿದ ಮೈಸೂರು ಹುಲಿ ಟಿಪ್ಪು ಸುಲ್ತಾನ್‌ಗೆ ಸಲ್ಲುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಶಿಥಿಲಗೊಂಡಿರುವ ಟಿಪ್ಪುವಿನ ರಾಕೆಟ್ ಫೋರ್ಟ್ ಹಾಗೂ ಮದ್ದಿನ ಮನೆಗಳ ಬಗೆಗಿನ ವರದಿಯನ್ನು ಓದಿದ ನಂತರ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಸ್ವತಃ ಕೇಂದ್ರ ಬಾಹ್ಯಾಕಾಶ ವಿಜ್ಞಾನಿಯೊಬ್ಬರನ್ನು ತಮ್ಮ ರಾಯಭಾರಿಯನ್ನಾಗಿ ಕಳುಹಿಸಿದ್ದಾರೆ.

 

ಇದರ ಉದ್ದೇಶ, ಕೋಟೆಯ ಶಿಥಿಲತೆಯ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವುದಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

 

ನೆನ್ನೆಯೇ ಸ್ಥಳ ಪರಿಶೀಲನೆ ನಡೆಸಿರುವ ಡಾ.ಕಲಾಂ ಅವರ ರಾಯಭಾರಿ ಡಾ.ಎ.ಶಿವಥಾಣು ಪಿಳ್ಳೈ ಅವರು ಶ್ರೀರಂಗ ಪಟ್ಟಣದಲ್ಲಿನ ಕೋಟೆ ಹಾಗೂ ಮದ್ದು ಮನೆಗಳ ದುಸ್ಥಿತಿಯನ್ನು ಕಂಡು ಮಮ್ಮಲ ಮರುಗಿದ್ದಾರೆ.

 

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳೊಂದಿಗೆ ಆಗಮಿಸಿದ್ದ ಡಾ.ಪಿಳ್ಳೈ ಅವರು `ಇಂದು ನನಗೆ ಈ ನೆಲದ ಬಗ್ಗೆ ನಿಜಕ್ಕೂ ಅಭಿಮಾನ ಉಕ್ಕಿ ಬರುತ್ತಿದೆ. ಇಡೀ ಜನಗತ್ತಿಗೇ ಕ್ಷಿಪಣಿ ತಂತ್ರಜ್ಞಾನ ಪರಿಚಯಿಸಿದ ಖ್ಯಾತಿ ಈ ನೆಲಕ್ಕಿದೆ' ಎಂದು ಹೇಳಿದ್ದಾರೆ.

 

ಕೋಟೆಯ ದುರವಸ್ಥೆಯ ಬಗ್ಗೆ ಕೇಳಿದಾಗ ಡಾ.ಪಿಳ್ಳೈ ಅವರು ಸ್ಥಳದ ಬಗೆಗಿನ ಸಂಪೂರ್ಣ ವಿವರಗಳನ್ನು ಸಂಗ್ರಹ ಮಾಡಿದ್ದೇನೆ. ಅದಲ್ಲದೇ ವಿವರವಾದ ವರದಿಯನ್ನು ಸಿದ್ಧಪಡಿಸಿ ಡಾ.ಕಲಾಂ ಅವರಿಗೆ ತಲುಪಿಸುವೆ ಎಂದಷ್ಟೇ ಪ್ರತಿಕ್ರಿಯಿಸಿದರು.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com