Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಪುರಾವೆ ಒದಗಿಸಿದರೆ ತನಿಖೆಗೆ ರೆಡಿ: ಮುಷರ್ರಫ್

ಇಸ್ಲಾಮಾಬಾದ್: ಭಯೋತ್ಪಾದಕರು ಇತ್ತೀಚೆಗೆ ಮುಂಬೈಯಲ್ಲಿ ನಡೆಸಿದ ವಿಧ್ವಂಸಕ ಕೃತ್ಯಗಳನ್ನು ನಾವು ಒಗ್ಗಟ್ಟಾಗಿ ಖಂಡಿಸುತ್ತೇವೆ ಮತ್ತು ಈ ಕೃತ್ಯದಲ್ಲಿ ಪಾಕಿಸ್ತಾನದ ಪಾತ್ರವಿದೆಯೆಂದು ಸಾಬೀತು ಮಾಡಿ ತೋರಿಸಿದರೆ, ತನಿಖೆಗೆ ನಾವು ಭಾರತದೊಂದಿಗೆ ಸಹಕರಿಸುತ್ತೇವೆ ಎಂದು ಪಾಕಿಸ್ತಾನದ ಅಧ್ಯಕ್ಷ ಮುಷರ್ರಫ್ ಪುನರುಚ್ಚರಿಸಿದ್ದಾರೆ.

 

ಭಾರತ ಪಾಕಿಸ್ತಾನದ ಮೇಲೆ ಹುರುಳಿಲ್ಲದ ಆರೋಪಗಳನ್ನು ಮಾಡುತ್ತಿದ್ದರೆ ಭಯೋತ್ಪಾದಕರು ನಿರೀಕ್ಷಿಸುತ್ತಿರುವ ಜಯ ಅವರಿಗೆ ಸಿಕ್ಕಂತಾಗುತ್ತದೆ ಎಂದವರು ಹೇಳಿದರು.

 

ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಿದ್ದ ಮುಷರ್ರಫ್, ಮುಂಬೈ ಸರಣಿ ಸ್ಫೋಟದಲ್ಲಿ ಮಡಿದವರಿಗೆ ಮತ್ತು ಹಾನಿಗೊಳಗದವರಿಗೆ ತಮ್ಮ ಮತ್ತು ರಾಷ್ಟ್ರದ ಪರವಾಗಿ ಸಂತಾಪ ವ್ಯಕ್ತಪಡಿಸಿದ್ದಾರೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com