ರೆಡ್ಡಿಗಲಾಟೆಯಿಂದ ಮಾಧ್ಯಮ ದುರ್ಬಳಕೆ ?
ಬೆಂಗಳೂರು:
ಇಂದಿನ ರಾಜಕೀಯದಲ್ಲಿ ಆಗುತ್ತಿರುವ ನಾಟಕೀಯ ಬೆಳವಣಿಗೆಯಿಂದ ಮಾಧ್ಯಮದ
ದುರ್ಬಳಕೆಯಾಗುತ್ತಿದೆ ಎಂದು ಲೇಖಕ ಆರ್. ಮೋಹನ್ ನಾಗಮ್ಮನವರ್ ಹೇಳಿದ್ದಾರೆ.
ಗದಗ ಜಿಲ್ಲಾ ವರದಿಗಾರರ
ಸಂಘದ ಅಧ್ಯಕ್ಷರಾಗಿ ಮಾತನಾಡುತ್ತಾ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಮಾಧ್ಯಮವನ್ನು
ಬಳಸುತ್ತಿದ್ದಾರೆ.
ಇತ್ತೀಚೆಗೆ ಜನಾರ್ಧನ
ರೆಡ್ಡಿ ಹಾಗೂ ಸರ್ಕಾರದ ನಡುವಿನ ಪ್ರಸಂಗವನ್ನು ಉಲ್ಲೇಖಿಸುತ್ತಾ ಕ್ಷಣ ಕ್ಷಣಕ್ಕೂ ಬದಲಾಗುತ್ತಿದ್ದ
ರೆಡ್ಡಿಯ ಮಾತಿನ ವರಸೆಯನ್ನು ಖಂಡಿಸಿದರು. ಮೊದಲ ಮಾಧ್ಯಮ ಗೋಷ್ಠಿಯಲ್ಲಿ
ಸಿಎಂ ಬಗ್ಗೆ ಆರೋಪ ಹೊರಿಸಿದರು, ನಂತರದ ಮಾಧ್ಯಮದ ಗೋಷ್ಠಿಯಲ್ಲಿ ಅದಕ್ಕೆ ವ್ಯತಿರಿಕ್ತವಾಗಿ
ಮಾತನಾಡಿದರು. ಇದನ್ನೆಲ್ಲಾ ವರದಿ ಮಾಡುವ ಮಾಧ್ಯಮದ ಮೇಲೆ ಜನರ ನಂಬಿಕೆ
ಬರಲು ಹೇಗೆ ಸಾಧ್ಯ. ರಾಜಕಾರಣಿಗಳ ಆಟದ ಗೊಂಬೆಯಂತೆ ಮಾಧ್ಯಮವು ವರ್ತಿಸುತ್ತಿದೆ,
ಇದರಿಂದ ಜನರಿಗೆ ತಪ್ಪು ಅಭಿಪ್ರಾಯ ಬರುವ ಸಾಧ್ಯತೆಯೇ ಹೆಚ್ಚು ಎಂದು ನಾಗಮ್ಮನವರ್
ಅಭಿಪ್ರಾಯಪಟ್ಟಿದ್ದಾರೆ.
ಟಿಎಸ್ಸಾರ್ ಪ್ರಶಸ್ತಿ ಪುರಸ್ಕೃತ
ಹಿರಿಯ ಪತ್ರಕರ್ತ ಸುರೇಂದ್ರ ದಾನಿ ಮಾತನಾಡುತ್ತಾ ಪತ್ರಕರ್ತರು ಸುದ್ದಿಯ ವಿಶೇಷತೆಯನ್ನು
ಗಮನಿಸಿ ಮುಖ್ಯವಾದುದನ್ನು ಹೇಳಬೇಕು ಇಲ್ಲದಿದ್ದರೆ ಸ್ವಾರಸ್ಯವಿಲ್ಲದ ಸುದ್ದಿಗಳು ಮೂಲೆಗುಂಪಾಗುತ್ತದೆ
ಎಂದರು.