Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಬೆಂಗಳೂರಿನಲ್ಲೂ ಹುಸಿ ಬಾಂಬ್ ಕರೆ

ಬೆಂಗಳೂರು : ರಾಷ್ಟ್ರದ ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಹುಸಿ ಬಾಂಬ್‌ಕರೆಗಳು ಸಾಮಾನ್ಯವಾಗಿದ್ದು ಬೆಂಗಳೂರು ಇದಕ್ಕೆ ಹೊರತಾಗಿಲ್ಲ. ಪ್ಯಾಲೇಸ್ ರಸ್ತೆ ಹಾಗೂ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಎರಡು ಕಟ್ಟಡಗಳಿಗೆ ಗುರುವಾರ ಕಿಡಿಗೇಡಿಗಳು ಹುಸಿಬಾಂಬ್ ಕರೆಮಾಡಿ ಪೊಲೀಸರನ್ನು ಆತಂಕಕ್ಕೆ ತಳ್ಳಿದರು.

 

ನಿನ್ನೆ ಬೆಳಗ್ಗೆ ೧೦.೩೦ಕ್ಕೆ ಇನ್‌ಫೆಂಟ್ರಿ ರಸ್ತೆಯ ಪೊಲೀಸ್ ಕಮೀಷನರ್ ಕಚೇರಿ ಪಕ್ಕದಲ್ಲಿರುವ ಎಂಬೆಸಿ ಸ್ಕ್ವೇರ್ ಕಟ್ಟಡಕ್ಕೆ ಬಾಂಬ್ ಬೆದರಿಕೆ ಕರೆಬಂತು. ಕರೆ ಮಾಡಿದಾತ ಇಂಗ್ಲೀಷ್‌ನಲ್ಲಿ ಮಾತನಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ. ತಕ್ಷಣ ಕಟ್ಟಡದಲ್ಲಿರುವ ಜನರನ್ನು ಹೊರಬರುವಂತೆ ಸೂಚಿಸಲಾಯಿತು. ಬಳಿಕ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಸತತ ಮೂರು ಗಂಟೆಗಳ ಕಾಲ ಪರಿಶೀಲಿಸಿ, ಬಾಂಬ್ ಇಲ್ಲದಿರುವುದನ್ನು ಖಚಿತಪಡಿಸಿತು.

 

ಮೊದಲ ಕರೆ ಬಂದ ಒಂದು ಗಂಟೆಯ ಬಳಿಕ ರಾಜಭವನದ ಚಾಲುಕ್ಯ ಹೋಟೆಲ್‌ನಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಕರೆಬಂತು. ಜನರನ್ನು ತೆರವುಗೊಳಿಸಿ ಪರಿಶೋಧಿಸಿದ ಬಾಂಬ್ ನಿಷ್ಕ್ರಿಯ ದಳದ ಪೊಲೀಸರು ಅದೊಂದು ಹುಸಿ ಬಾಂಬ್ ಕರೆ ಎಂಬುದನ್ನು ದೃಢಪಡಿಸಿದರು.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com