|
ಬೆಂಗಳೂರು ಬಸ್‌ನಿಲ್ದಾಣದಲ್ಲಿ
ಬಾಂಬ್ ಪತ್ತೆ
ಬೆಂಗಳೂರು :
ನಗರದ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ ನಾಡ ಬಾಂಬ್ ಪತ್ತೆಯಾಗಿದ್ದು
ಪೊಲೀಸರು ಬಾಂಬ್‌ನ್ನು ನಿಷ್ಕ್ರಿಯಗೊಳಿಸಿದ್ದಾರೆ.
ಆರ್.ಪಿ.ಸಿ ಲೇಔಟ್‌ನಿಂದ
ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಬಸ್‌ನಲ್ಲಿ ಕಪ್ಪು ಬಣ್ಣದ ಪೆಟ್ಟಿಗೆಯೊಂದಿದ್ದು,
ಬಸ್ ಬಿಎಂಟಿಸಿ ಬಸ್ ನಿಲ್ದಾಣ ಪ್ರವೇಶಿಸಿದರೂ ಪೆಟ್ಟಿಗೆಯನ್ನೂ ಯಾರೂ ತೆಗೆದುಕೊಂಡು ಹೋಗಲಿಲ್ಲ.
ಬಸ್ ನಿರ್ವಾಹಕರು ಮತ್ತು ಚಾಲಕರು ಈ ಪೆಟ್ಟಿಗೆಯಲ್ಲಿ ಫ್ಲಾಟ್ ಫಾರಂ ಸಂಖ್ಯೆ ೧ರಲ್ಲಿ
ಇರಿಸಿದ್ದರು.
ತುಂಬಾ ಹೊತ್ತಾದರೂ
ವಾರಸುದಾರರಿಲ್ಲದ ಈ ಪೆಟ್ಟಿಗೆಯನ್ನು ಗಮನಿಸಿದ ಜನರಲ್ಲಿ ಆತಂಕ ಮೂಡಿ, ಪೊಲೀಸರಿಗೆ
ವಿಷಯ ತಿಳಿಸಿದರು.
ಪೆಟ್ಟಿಗೆಯನ್ನು
ಪರಿಶೀಲಿಸಿದಾಗ ಅದರಲ್ಲಿ ಜಿಲೆಟಿನ್ ಕಡ್ಡಿಗಳು ಮತ್ತು ರಾಸಾಯನಿಕ ಇರುವುದು ಪತ್ತೆಯಾಯಿತು.
ಬಾಂಬ್‌ನ್ನು ನಿಷ್ಕ್ರಿಯಗೊಳಿಸಲಾಯಿತು ಎಂದು ಪೊಲೀಸ್ ಉಪ ಆಯುಕ್ತ ಶರತ್‌ಚಂದ್ರ
ತಿಳಿಸಿದ್ದಾರೆ. |