ವಿಪ್ರೊ ಲಾಭದಲ್ಲಿ ಶೇ
೪೫ರಷ್ಟು ಹೆಚ್ಚಳ
ತ್ರೈಮಾಸಿಕ
ಆದಾಯ ವರದಿ ಬಿಡುಗಡೆ
ಬೆಂಗಳೂರು :
ವಿಪ್ರೋ ತನ್ನ ಮೊದಲನೆ ತ್ರೈಮಾಸಿಕದಲ್ಲಿ ಶೇ ೪೫ರಷ್ಟು ವಾರ್ಷಿಕ ಲಾಭವನ್ನು
ಗಳಿಸಿರುವುದಾಗಿ ಸಂಸ್ಥೆಯ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಪ್ರಕಟಿಸಿದ್ದಾರೆ.
ಮೊದಲನೇ
ತ್ರೈಮಾಸಿಕದಲ್ಲಿ ವಿಪ್ರೋದ ಒಟ್ಟು ನಿವ್ವಳ ಲಾಭ ೬೨೦ ಕೋಟಿ ರೂಪಾಯಿ. ಒಟ್ಟು
ಆದಾಯದಲ್ಲಿ ಶೇ ೩೯ರಷ್ಟು ಏರಿಕೆ ಕಂಡಿದ್ದು ಇದು ಕಳೆದ ವರ್ಷ ೨೦೩೫.೫ ರೂಗಳಾಗಿದ್ರೆ,
ಈ ಬಾರಿ ೩೧೪೩ಕೋಟಿ ರೂಪಾಯಿಗೇರಿದೆ ಎಂದು ಪ್ರೇಮ್‌ಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.