ಭಾರತೀಯರನ್ನು ಕರೆತರಲು ೪ನೌಕೆ ಲೆಬನಾನ್‌ಗೆ
ದುಬೈ:
ಯುದ್ಧ ಪೀಡಿತ ಲೆಬನಾನ್‌ನಿಂದ ಭಾರತಕ್ಕೆ ಮರಳಲು ಇಚ್ಛಿಸಿರುವ ಭಾರತೀಯರನ್ನು
ಕರೆತರಲು ನೌಕಾಪಡೆಯ ನಾಲ್ಕು ನೌಕೆಗಳು ಲೆಬನಾನ್‌ಗೆ ಪ್ರಯಾಣ ಬೆಳೆಸಿವೆ.
ಇವುಗಳ ಪೈಕಿ ಐಎನ್‌ಎಸ್
ಮುಂಬೈ ನೌಕೆ, ಬೆರೂತ್ ಬಂದರಿಗೆ ಗುರುವಾರ ತಲುಪಲಿದೆ. ಭಾರತಕ್ಕೆ ಮರಳಲು
ಎಷ್ಟು ಜನ ಪ್ರಯಾಣಿಕರು ಸಿದ್ಧರಾಗಿದ್ದಾರೆ ಎಂಬುದನ್ನು ತಿಳಿದುಕೊಂಡ ಬಳಿಕ ಉಳಿದ ಮೂರು
ನೌಕೆಗಳಿಗೆ ಬಂದರು ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ಮೂಲಗಳು
ತಿಳಿಸಿವೆ. ಐಎನ್‌ಎಸ್ ಮುಂಬೈ ನೌಕೆ ಜೊತೆಗಿರುವ ಉಳಿದ ನೌಕೆಗಳೆಂದರೆ ಐಎನ್‌ಎಸ್ ಬ್ರಹ್ಮಪುತ್ರಾ,
ಐಎನ್‌ಎಸ್ ಬೆತ್ವಾ ಮತ್ತು ಐಎನ್‌ಎಸ್ ಶಕ್ತಿ.
ಎಷ್ಟು ಜನರು ಭಾರತಕ್ಕೆ
ಹಿಂದಿರುಗಲಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದೇ ದೊಡ್ಡ ಸಮಸ್ಯೆಯಾಗಿದೆ.
ಏಕೆಂದರೆ ಲೆಬನಾನ್‌ನೆಲ್ಲೆಡೆ ಭಾರತೀಯರು ಚದುರಿ ಹೋಗಿದ್ದಾರೆ ಎಂದು ಅಧಿಕಾರಿಗಳು
ತಿಳಿಸಿದ್ದಾರೆ. ಲೆಬನಾನ್ ಉಗ್ರರ ಮೇಲೆ ಇಸ್ರೆಲ್ ತೀವ್ರ ದಾಳಿಗಿಳಿದಿರುವುದರಿಂದ, ಭಾರತೀಯರು
ಆ ದೇಶವನ್ನು ತೊರೆಯುವುದು ಅನಿವಾರ್ಯವಾಗಿದೆ.