ಸುಜ್ಲಾನ್ ಗಾಳಿ ವಿದ್ಯುತ್ ಸ್ಥಾವರ ಉಡುಪಿಗೆ
ಉಡುಪಿ: ಸುಜ್ಲಾನ್
ಶಕ್ತಿ ಸಂಸ್ಥೆಯು ೧೫೦೦ ಮೆಗಾವ್ಯಾಟ್ ಸಾಮರ್ಥದ ಗಾಳಿಯಂತ್ರವನ್ನು ಉಡುಪಿಯಲ್ಲಿ ಸ್ಥಾಪಿಸಲಿದೆ.
ಸಂಸ್ಥೆಯ
ಕಾರ್ಯಕಾರಿ ನಿರ್ದೇಶಕರ ಸಮಿತಿಯು ಈಗಾಗಲೇ ರಾಜ್ಯದಲ್ಲಿ ೧೫ ಬಿಲಿಯನ್ ಹಣ ಹೂಡಲು
ನಿರ್ಧರಿಸಿದೆ. ಸುಜ್ಲಾನ್ ಸಂಸ್ಥೆಯು ೨.೫ ಬಿಲಿಯನ್ ವೆಚ್ಚದಲ್ಲಿ ಬರೋಡದಲ್ಲಿ ಒಂದು ಪೂರಕ
ಕೇಂದ್ರವನ್ನು, ಹಾಗೂ ೫ ಬಿಲಿಯನ್ ವೆಚ್ಚದಲ್ಲಿ ಕೋಯಮತ್ತೂರಿನಲ್ಲಿ ಇನ್ನೊಂದು
ಕೇಂದ್ರವನ್ನು ತೆರೆಯಲಿದೆ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ತುಲಸಿ ಆರ್.
ತಂತಿ ತಿಳಿಸಿದರು.