Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಅಪಹರಣಕಾರರಿಗೆ ಎನ್‌ಡಿಎಯಿಂದ ಹಣ?

`ಕಂದಹಾರ ಅಪಹರಣಕಾರರಿಗೆ ಹಣ ನೀಡಿ ಸ್ವಿಸ್‌ನ ಉದ್ಯಮಿಯ ಬಿಡುಗಡೆ

 

ನವದೆಹಲಿ: ಎನ್‌ಡಿಎ ಸರ್ಕಾರವು ಕಂದಹಾರ ಅಪಹರಣಕಾರರಿಗೆ ಒತ್ತೆಹಣ ಕೊಟ್ಟು ಸ್ವಿಸ್‌ನ ಉದ್ಯಮಿಯನ್ನು ಬಿಡುಗಡೆ ಮಾಡಿದೆ ಎಂದು ಕಾಂಗ್ರೆಸ್‌ನ ಹಿರಿಯ ಸಂಸದ ಆರ್. ಕೆ. ಆನಂದ್ ಮತ್ತು ಬಿಜೆಪಿಯ ಮಾಜಿ ನಾಯಕ ಮದನಲಾಲ್ ಖುರಾನ ಬುಧುವಾರ ಸದನದಲ್ಲಿ ಆರೋಪಿಸಿದ್ದಾರೆ.

 

ಇಬ್ಬರೂ ನಾಯಕರ ಹೇಳಿಕೆ ಪ್ರಕಾರ ಆಗಿನ ವಿದೇಶಾಂಗ ವ್ಯವಹಾರ ಸಚಿವರಾಗಿದ್ದ ಜಸ್ವಂತ್ ಸಿಂಗ್ ಉಗ್ರಗಾಮಿಗಳ ನಾಯಕ ಮೌಲಾನ ಮಸೂದ್ ಅಜರ್ ಜೊತೆ ಕೂಡಿ ಕಂದಾಹಾರ್‌ಗೆ ತೆರಳಿ ಸ್ವಿಸ್ ದೇಶದ ಪ್ರಮುಖ ವ್ಯಕ್ತಿ ರೋಬರ್ಟ್ ಗೋರಿಯನ್ನು ಬಿಡುಗಡೆಗೊಳಿಸಿದರು.

 

ಕರೆನ್ಸಿ ನೋಟುಗಳ ಮುದ್ರಣ ವ್ಯಾಪಾರದಲ್ಲಿ ಪ್ರಮುಖನಾದ ಗೋರಿಯ ಬಿಡುಗಡೆಗೆ ಸ್ವಿಸ್‌ನಿಂದ ತೀವ್ರ ಒತ್ತಡವಿತ್ತು ಎಂದು ಹೇಳಲಾಗಿದೆ.

 

ಕಂದಹಾರ್ ಅಪಹರಣದ ಬಗ್ಗೆ ತನಿಖೆಗೆ ಒತ್ತಾಯಿಸಿ ಪ್ರಧಾನಿ ಮನಮೋಹನ್ ಸಿಂಗ್‌ಗೆ ಗೋರಿ ಬರೆದಿರುವ ಪತ್ರ ಮತ್ತು ಅದಕ್ಕೆ ಪ್ರಧಾನಿ ನೀಡಿರುವ ಉತ್ತರದ ಉಲ್ಲೇಖ ಮಾಡಿದ ಆನಂದ್ ಎನ್‌ಡಿಎನ ಹಿರಿಯ ಅಧಿಕಾರಿಗಳು, ನಾಯಕರು ಇದರಲ್ಲಿ ಭಾಗಿಗಳು ಎಂದಿದ್ದಾರೆ.

 

ಈ ವಿಷಯದ ಬಗ್ಗೆ ಸ್ವಿಡ್ಜರ್ ಲ್ಯಾಂಡ್‌ನ ವಿದೇಶಾಂಗ ಸಚಿವ ಜೋಸೆಫ್ ಡೈಸ್ ಹಾಗೂ ಜಸ್ವಂತ್ ಸಿಂಗ್ ನಡುವೆ ದೀರ್ಘವಾದ ಟೆಲಿಫೋನ್ ಸಂಭಾಷಣೆ ನಡೆದಿದೆ ಎಂದು ಸ್ವಿಸ್‌ನ ಪತ್ರಿಕೆಗಳು ಹೇಳಿವೆ.

 

೨೦೦ ಮಿಲಿಯನ್ ಡಾಲರ್ ಹಣವನ್ನು ಪಡೆದಿಲ್ಲವೆಂದು ಜಸ್ವಂತ್‌ಸಿಂಗ್ ಹೇಳಲು ಸಾಧ್ಯವೇ ಇಲ್ಲ, ಈ ಹೇಳಿಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತಿರಸ್ಕಾರಕ್ಕೊಳಗಾಗಬೇಕಾಗುತ್ತದೆ ಎಂದು ಸಂಸದ ಆನಂದ್ ಹೇಳಿದ್ದಾರೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com