ಗಣಿಲಂಚ ಪ್ರಕರಣ:
ಜನಾರ್ದನ ರೆಡ್ಡಿ ಅಮಾನತು
ಸಂಯುಕ್ತ ಸರಕಾರದ
ಅಸ್ತಿತ್ವಕ್ಕೆ ಪೆಟ್ಟು ?
ಬೆಂಗಳೂರು :
ಗಣಿ ಲಂಚ ಪ್ರಕರಣವನ್ನು ಸಮರ್ಥಿಸಿ ಮತ್ತೊಮ್ಮೆ ಸದನದಲ್ಲಿ ಮಾತನಾಡಿದ ಬಿಜೆಪಿಯ
ಜನಾರ್ದನ ರೆಡ್ಡಿಯವರನ್ನು ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ಬಿಜೆಪಿ
ಅಮಾನತುಗೊಳಿಸಿದೆ.
ಮುಖ್ಯಮಂತ್ರಿ ಎಚ್.
ಡಿ. ಕುಮಾರಸ್ವಾಮಿ ಅವರು ೧೫೦ ಕೋಟಿ ರೂಪಾಯಿಗಳ ಲಂಚ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ
ಎಂಬ ತನ್ನ ಹೇಳಿಕೆ ನಿಜ ಎಂದು ರೆಡ್ಡಿ ಬುಧವಾರ ಸದನದಲ್ಲಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದರು.
ಇದರಿಂದ ಸಂಯುಕ್ತ ಸರಕಾರದ ಅಸ್ತಿತ್ವಕ್ಕೇ ಪೆಟ್ಟು ಬೀಳುವ ರೀತಿಯಲ್ಲಿರುವುದರಿಂದ
ಬಿಜೆಪಿ ವರಿಷ್ಠರು ರೆಡ್ಡಿಯವರನ್ನು ಪಕ್ಷದಿಂದ ಅಮಾನತುಗೊಳಿಸಿದ್ದಾರೆ.